ನೈಸರ್ಗಿಕ ದೃಷ್ಟಿ ಸುಧಾರಣೆಗೆ ಪರಿಣಾಮಕಾರಿ ಮಾರ್ಗಗಳಿವು
ದಿನ ನಿತ್ಯ ಪೋಷಕಾಂಶ ಭರಿತ ಆಹಾರಗಳನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾದ ಗ್ಯಾಜೆಟ್ಸ್ ಬಳಕೆಯಿಂದಾಗಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿದೆ. ಸ್ಕ್ರೀನ್ ಅವಧಿಯನ್ನು ಮಿತಗೊಳಿಸುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನಿರ್ಜಲೀಕರಣದಿಂದಾಗಿ ಕಣ್ಣಿನಲ್ಲಿ ಕಿರಿಕಿರಿ ಕಂಡು ಬರಬಹುದು. ಜೊತೆಗೆ ಇತರ ಕಣ್ಣಿನ ಸಮಸ್ಯೆಗಳು ಕೂಡ ಹೆಚ್ಚಾಗಬಹುದು. ಇದನ್ನು ತಪ್ಪಿಸಲು ಪ್ರತಿ ದಿನ ಸಾಕಷ್ಟು ನೀರು ಕುಡಿಯಿರಿ.
ಕೆಲವರಿಗೆ ಬಿಸಿಲಿನಲ್ಲಿ ಹೋದಾಗ ಕಣ್ಣು ಉರಿ, ಕಣ್ಣಿನಿಂದ ನೀರು ಸುರಿಯುವುದು, ಕಣ್ಣಿನಲ್ಲಿ ಕಿರಿಕಿರಿಯಂತಹ ಸಮಸ್ಯೆ ಉಂಟಾಗಬಹುದು. ಇದನ್ನು ತಪ್ಪಿಸಲು ಹೊರ ಹೋಗುವಾಗ ಸನ್ ಗ್ಲಾಸಸ್ ಧರಿಸಿ.
ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಪ್ರಾರಂಭಿಕ ಹಂತದಲ್ಲಿಯೇ ದೃಷ್ಟಿ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು.
ಸರಿಯಾಗಿ ನಿದ್ರೆ ಮಾಡದೇ ಇರುವುದರಿಂದಲೂ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದನ್ನು ತಪ್ಪಿಸಲು ನಿತ್ಯ ಸಾಕಷ್ಟು ನಿದ್ರೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ನಿತ್ಯ ಕಣ್ಣಿನ ವ್ಯಾಯಾಮ ಮಾಡುವುದರಿಂದ ಇದು ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ. ದೀರ್ಘಾವಧಿಯಲ್ಲಿ ದೃಷ್ಟಿ ಸುಧಾರಿಸಲು ಕೂಡ ಪ್ರಯೋಜನಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.