ಸಿಟ್ರಸ್ ಹಣ್ಣುಗಳಲ್ಲಿ ಹೆಚ್ಚಿನ ಆಮ್ಲೀಯತೆ ಕಂಡು ಬರುವುದರಿಂದ ಇದು ದೇಹವು ಆಂಟಿಆಕ್ಸಿಡೆಂಟ್‌ಗಳನ್ನು ಹೀರಿಕೊಳ್ಳುವುದನ್ನು ಆಡ್ಡಿಪಡಿಸಬಹುದು. ಹಾಗಾಗಿ, ಟೀ ಜೊತೆ ಸಿಟ್ರಸ್ ಹಣ್ಣುಗಳನ್ನು ತಿನ್ನಬಾರದು.
ಪುದೀನಾದಲ್ಲಿ ಮೆಂಥಾಲ್ ಇದ್ದು ಇದರ ರಿಫ್ರೇಶ್ ಸುವಾಸನೆಯು ಚಹಾದ ಸೂಕ್ಷ್ಮ ರುಚಿಯನ್ನು ಮೀರಿಸುತ್ತದೆ. ಹಾಗಾಗಿ, ಚಹಾ ಜೊತೆಗೆ ಮಿಂಟಿ ಆಹಾರಗಳ ಸೇವನೆ ಒಳ್ಳೆಯದಲ್ಲ ಎನ್ನಲಾಗುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ಚಹಾ ಜೊತೆಗೆ ಎಂದಿಗೂ ಸಹ ಚಾಕೊಲೇಟ್ ಅನ್ನು ಸೇವಿಸಬಾರದು.
ಟೀ ಜೊತೆಗೆ ಎಂದಿಗೂ ಸಹ ಹೆಚ್ಚು ಮಸಾಲೆಯುಕ್ತ ಆಹಾರಗಳನ್ನು ಸೇವಿಸಬೇಡಿ. ಇದರಿಂದ ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆ ಉಂಟಾಗಬಹುದು.
ಚಹಾ ಜೊತೆಗೆ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಇದು ಚಹಾದಲ್ಲಿನ ಪಾಲಿಫಿನಾಲ್‌ಗಳನ್ನು ತಟಸ್ಥಗೊಳಿಸುತ್ತದೆ. ಮಾತ್ರವಲ್ಲದೆ, ಅವುಗಳ ಉತ್ಕರ್ಷಣ ನಿರೋಧಕ ಪ್ರಯೋಜನಗಳನ್ನು ಕಡಿಮೆ ಮಾಡುತ್ತದೆ.
ಟೀ ಜೊತೆಗೆ ಅರಿಶಿನ ಅಥವಾ ಅರಿಶಿನ ಮಿಶ್ರಿತ ಆಹಾರಗಳ ಸೇವನೆಯು ತಲೆತಿರುಗುವಿಕೆ, ವಾಂತಿ, ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಬಹುದು.
ಟೀ ಜೊತೆಗೆ ಮೊಸರಿನ ಉತ್ಪನ್ನಗಳನ್ನು ಸೇವಿಸುವುದರಿಂದ ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಟೀ ಜೊತೆಗೆ ಘನೀಕೃತ ಆಹಾರಗಳ ಸೇವನೆಯು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಹುದು ಎನ್ನಲಾಗುತ್ತದೆ.
ಚಹಾದಲ್ಲಿರುವ ಟ್ಯಾನಿನ್ ಎಂಬ ಸಂಯುಕ್ತದಿಂದಾಗಿ ಇದರೊಂದಿಗೆ ಹಸಿರು ಸೊಪ್ಪು ತರಕಾರಿಗಳ ಸೇವನೆಯು ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.