ಮಳೆಗಾಲದಲ್ಲಿ ತುಳಸಿ ನೀರನ್ನು ಸೇವಿಸಿ..!ಇದರಿಂದ ಈ ಐದು ಸೋಂಕುಗಳು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ

Zee Kannada News Desk
Aug 10,2024

ಔಷಧೀಯ ಗುಣಗಳು

ಆಯುರ್ವೇದದಲ್ಲಿ, ತುಳಸಿ ಎಲೆಗಳು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ವಿಟಮಿನ್ ಎ, ಕೆ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮಾಗ್ನಿಶಿಯಂ ಅಂಶಗಲಿಂದ ತುಳಸಿ ಕೂಡಿದ್ದು ಇದರಿಂದ ಅನೇಕ ಆರೋಗ್ಯ ಪ್ರಯೋಜನೆಗಳಿವೆ.

ಆರೋಗ್ಯ ಲಾಭ

ತುಳಸಿಯನ್ನು ನೀರಿನಲ್ಲಿ ಕುದಿಸಿ ಬೆಳಗ್ಗೆ ಕುಡಿದರೆ ಹಲವಾರು ಆರೋಗ್ಯ ಲಾಭಗಳು ಸಿಗುತ್ತವೆ. ಹಾಗಾದರೆ ಇದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನೆಗಳೇನು..? ತಿಳಿಯಲು ಮುಂದೆ ಓದಿ...

ಸೋಂಕು

ಶೀತ, ಕೆಮ್ಮು, ವೈರಲ್ ಮತ್ತು ಋತುಮಾನದ ಸೋಂಕುಗಳನ್ನು ತಡೆಗಟ್ಟುವಲ್ಲಿ ತುಳಸಿ ತುಂಬಾ ಪ್ರಯೋಜನಕಾರಿಯಾಗಿದೆ.

ಸಕ್ಕರೆ ನಿಯಂತ್ರಣ

ನಿಮಗೆ ಮಧುಮೇಹ ಇದ್ದರೆ, ತುಳಸಿ ಎಲೆಗಳನ್ನು ಕುದಿಸಿ ಬೆಳಿಗ್ಗೆ ನಿಯಮಿತವಾಗಿ ಕುಡಿಯುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕೆಮ್ಮು

ಗಂಟಲು ನೋವು, ಊತ, ನೋವು ಮತ್ತು ಲೋಳೆಯಂತಹ ಶೀತ ಮತ್ತು ಕೆಮ್ಮಿನ ಲಕ್ಷಣಗಳನ್ನು ನಿವಾರಿಸಲು ತುಳಸಿ ತುಂಬಾ ಪ್ರಯೋಜನಕಾರಿಯಾಗಿದೆ.

ಹೊಟ್ಟೆ ಸಂಬಂಧಿತ ಕಾಯಿಲೆ

ತುಳಸಿಯನ್ನು ಕುದಿಸಿ ಕುಡಿಯುವುದು ಹೊಟ್ಟೆಯ ಗ್ಯಾಸ್, ಉಬ್ಬುವುದು, ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಲು ತುಂಬಾ ಸಹಾಯ ಮಾಡುತ್ತದೆ.

ಹೇಗೆ ಕುಡಿಯಬೇಕು

ಒಂದು ಲೋಟ ನೀರಿಗೆ 10-12 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಕಡಿಮೆಯಾದಾಗ, ಅದನ್ನು ಒಂದು ಪಾತ್ರೆಯಲ್ಲಿ ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story