ಸಾಸಿವೆ ಎಣ್ಣೆಯಲ್ಲಿ ತಯಾರಿಸಿದ ಆಹಾರವು ತುಂಬಾ ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ.ಇದು ದೇಹವನ್ನು ಅನೇಕ ರೋಗಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ.
ಸಾಸಿವೆ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಬಗೆಹರಿಯುತ್ತದೆ. ಅಲ್ಲದೆ, ನಿರ್ಜೀವ ಕೂದಲು ಕೂಡಾ ಕಾಂತಿಯುಕ್ತವಾಗುತ್ತದೆ.
ಹೊಕ್ಕಳಿಗೆ ಸಾಸಿವೆ ಎಣ್ಣೆ ಹಾಕುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಯುತ್ತದೆ. ಪೀರಿಯೇಡಸ್ ವೇಳೆ ಕಾಣಿಸಿಕೊಳ್ಳುವ ನೋವು ಕೂಡಾ ಇದರಿಂದ ಕಡಿಮೆಯಾಗುತ್ತದೆ.
ಸಾಸಿವೆ ಎಣ್ಣೆಯನ್ನು ಬಳಸಿ ಮಾಡಿದ ಅಡುಗೆ ಆರೋಗ್ಯಕ್ಕೆ ಬಹಳ ಸಹಾಯಕವಾಗಿದೆ.
ಸಾಸಿವೆ ಎಣ್ಣೆಯಿಂದ ಪಾದದ ಅಡಿಗೆ ಮಾಡುವ ಮಸಾಜ್ ನಿಂದ ಶರೀರಕ್ಕೆ ಲಾಭದಾಯಕವಾಗಿದೆ. ಇದರಿಂದ ನಿದ್ದೆಯೂ ಚೆನ್ನಾಗಿ ಬರುತ್ತದೆ.
ಸುಸ್ತಾಗುತ್ತಿದ್ದರೆ ಇಡೀ ದೇಹಕ್ಕೆ ಸಾಸಿವೆ ಎಣ್ಣೆಯನ್ನು ತಿಕ್ಕಿ ಮಸಾಜ್ ಮಾಡಬೇಕು. ಇದರಿಂದ ಬ್ಲಡ್ ಸರ್ಕ್ಯುಲೇಶನ್ ಚೆನ್ನಾಗಿ ಆಗುತ್ತದೆ.
ಸಾಸಿವೆ ಎಣ್ಣೆಗೆ ಮೇಣ ಬೆರೆಸಿ ಹಚ್ಚುವುದರಿಂದ ಒಡೆದ ಹಿಮ್ಮಡಿಯ ಸಮಸ್ಯೆ ನಿವಾರಣೆಯಾಗುತ್ತದೆ.
ಸಾಸಿವೆ ಎಣ್ಣೆ ಹಚ್ಚುವುದರಿಂದ ತ್ವಚೆ ಕೋಮಲವಾಗುತ್ತದೆ. ಇದು ಮುಖದ ಮೇಲೆ ಸುಕ್ಕು ಬಾರದಂತೆ ಕೂಡಾ ತಡೆಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.