ನಮ್ಮ ಆರೋಗ್ಯಕ್ಕೆ ಹಾಲು ಎಷ್ಟು ಮುಖ್ಯ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು.
ಹಾಲಿನಲ್ಲಿ ಕ್ಯಾಲ್ಶಿಯಂ, ವಿಟಮಿನ್ ಡಿ, ಪ್ರೋಟಿನ್ ಮತ್ತು ಪೊಟ್ಯಾಷಿಯಂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
ಆದರೆ ದಿನಕ್ಕೆ ಎಷ್ಟು ಲೋಟ ಹಾಲು ಕುಡಿಯಬೇಕು ಎನ್ನುವ ಮಾಹಿತಿ ನಿಮಗಿದೆಯೇ?
ವ್ಯಕ್ತಿಯ ವಯಸ್ಸು, ಲಿಂಗ, ಎತ್ತರ ಮುಂತಾದ ಅಮಶಗಳು ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಹಾಲು ಕುಡಿಯಬೇಕು ಎನ್ನುವುದನ್ನು ನಿರ್ಧರಿಸುತ್ತದೆ.
ನವ ಜಾತ ಶಿಶು ಮತ್ತು ಮಕ್ಕಳಿಗೆ ದಿಒನಕ್ಕೆ ಒಂದರಿಂದ ೨.೫ ಲೋಟ ಹಾಲು ಬೇಕಾಗುತ್ತದೆ. ಹಿರಿಯರು ದಿನಕ್ಕೆ ೩ ಲೋಟ ಹಾಲು ಕುಡಿಯಬಹುದು.
ನಿಮಗೆ ಹಾಲು ಕುಡಿಯುವುದಿಲ್ಲ ಎಂದಾದರೆ ಪನೀರ್, ಮೊಸರು, ಲ್ಯಾಕ್ಟೋಸ್ ಫ್ರೀ ಹಾಲು, ಸೋಯಾ ಮಿಲ್ಕ್ ಅನ್ನು ಸೇವಿಸಬಹುದು.
ಮೂಳೆಗಳ ಆರೋಗ್ಯಕ್ಕೆ ಹಾಲು ಒಳ್ಳೆಯದು. ಇದು ದೇಹ ತೂಕ ಇಳಿಸಲು ಸಹಾಯ ಮಾಡುತ್ತದೆ. ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.