ಬಲೂನ್ ತರ ಪೂರಿ ಚೆನ್ನಾಗಿ ಉಬ್ಬಿ ಬರಬೇಕೇ? ಈ ಟಿಪ್ಸ್ ಟ್ರೈ ಮಾಡಿ


ಸಾಮಾನ್ಯವಾಗಿ ಮನೆಯಲ್ಲಿ ಪೂರಿಗಳನ್ನು ತಯಾರಿಸುವಾಗ ಉಬ್ಬಿ ಬರುವುದಿಲ್ಲ. ಅಥವಾ ಏನಾದರೊಂದು ಕೊರತೆ ಕಂಡುಬರುತ್ತದೆ. ಹೀಗಾಗಿ ಪೂರಿ ಚೆನ್ನಾಗಿ ಉಬ್ಬಿ ಬರಬೇಕೆಂದರೆ ಏನು ಮಾಡಬೇಕು ಎಂಬ ಸಿಂಪಲ್ ಟಿಪ್ಸ್ ನಿಮಗೆ ತಿಳಿಸಿಕೊಡಲಿದ್ದೇವೆ.


ಪೂರಿ ಹಿಟ್ಟಿಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ನಾದಿ. ಬಳಿಕ ಅದನ್ನು ಕನಿಷ್ಠ ಅರ್ಧ ಘಂಟೆಯವರೆಗೆ ಮುಚ್ಚಿಡಿ. ನಂತರ ಪೂರಿಗಳು ತಯಾರಿಸಿ ಎಣ್ಣೆಯಲ್ಲಿ ಬಿಟ್ಟರೆ, ಪೂರಿ ಉಬ್ಬುತ್ತದೆ


ಪೂರಿಗಳಿಗೆ ಹಿಟ್ಟನ್ನು ತುಂಬಾ ಗಟ್ಟಿಯಾಗಿ ಅಥವಾ ಮೃದುವಾಗಿ ಬೆರೆಸಬಾರದು. ಅಂದಾಜು ಹದದಲ್ಲಿ ಬೆರಿಸಿಟ್ಟರೆ ಪೂರಿ ಉಬ್ಬಿ ಬರುತ್ತದೆ.


ಒಂದರ ಮೇಲೊಂದರಂತೆ ಒಂದೇ ಪೂರಿ ಇಟ್ಟು ಲಟ್ಟಿಸಿದರೆ ಪೂರಿ ಉಬ್ಬುವುದಿಲ್ಲ. ಜೊತೆಗೆ ರೋಲ್ ಮಾಡಿದ ನಂತರ 10-15 ನಿಮಿಷಗಳಿಗಿಂತ ಹೆಚ್ಚು ಕಾಲ ಇಡಬೇಡಿ


ಒಂದೇ ಪೂರಿಗಳನ್ನು ಹುರಿಯಲು ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಬೇಕು. ಇಲ್ಲದಿದ್ದರೆ ಅವು ಉಬ್ಬುವುದಿಲ್ಲ


ಪೂರಿಗಳನ್ನು ಲಟ್ಟಿಸುವಾಗ ಹಿಟ್ಟನ್ನು ಬಳಸಬೇಡಿ. ಎಣ್ಣೆಯನ್ನು ಬಳಕೆ ಮಾಡಿದರೆ ಅವು ಬೇಗ ಉಬ್ಬುವುದಲ್ಲದೆ, ಬಾಣಲೆಯ ಕೆಳಭಾಗದಲ್ಲಿ ಕಪ್ಪಾಗುವುದಿಲ್ಲ.


ಪೂರಿಯನ್ನು ಎಣ್ಣೆಗೆ ಹಾಕಿದ ನಂತರ ರಂಧ್ರಗಳಿರುವ ಸೌಟುವಿನಿಂದ ಲಘುವಾಗಿ ಒತ್ತಿರಿ. ಆಗ ಪೂರಿ ಸಂಪೂರ್ಣವಾಗಿ ಊದಿಕೊಳ್ಳುತ್ತದೆ

VIEW ALL

Read Next Story