ಶ್ರಮದ ಅಗತ್ಯವಿಲ್ಲದೆ ತೂಕ ಇಳಿಸಲು ಎಳನೀರಿಗೆ ಇದನ್ನು ಬೆರೆಸಿ ಕುಡಿಯಿರಿ

ದುಪ್ಪಟ್ಟು ಲಾಭ

ಎಳನೀರಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್’ನಂತಹ ಪೋಷಕಾಂಶಗಳು ಮತ್ತು ಎಲೆಕ್ಟ್ರೋಲೈಟ್ಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಅಂದಹಾಗೆ ಎಳನೀರಿಗೆ ಸಬ್ಜಾ ಕಾಳುಗಳನ್ನು ಬೆರೆಸಿ ಕುಡಿದರೆ ದೇಹಕ್ಕೆ ದುಪ್ಪಟ್ಟು ಲಾಭವಾಗುತ್ತದೆ ಎನ್ನುತ್ತಾರೆ ಪೌಷ್ಟಿಕತಜ್ಞರು.

ಉತ್ಕರ್ಷಣ ನಿರೋಧಕ

ಎಳನೀರಿನಲ್ಲಿ ಕರಗುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ನಿರ್ಜಲೀಕರಣದಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿ. ಸಬ್ಜಾ ಬೀಜಗಳು ನೈಸರ್ಗಿಕ ದೇಹ ಶೀತಕವಾಗಿ ಕಾರ್ಯನಿರ್ವಹಿಸುತ್ತವೆ.

ಅಧಿಕ ಉಷ್ಣ

ಎಳನೀರಿಗೆ ಸಬ್ಜಾ ಕಾಳು ಸೇರಿಸಿ ಸ್ವಲ್ಪ ಹೊತ್ತು ನೆನೆಸಿ ಕುಡಿದರೆ ದೇಹದಲ್ಲಿರುವ ಅಧಿಕ ಉಷ್ಣದಿಂದ ಶೀಘ್ರ ಪರಿಹಾರ ಸಿಗುತ್ತದೆ.

ತೂಕ ಇಳಿಕೆ

ಎಳನೀರಿಗೆ ಸಬ್ಜಾ ಕಾಳು ಮಾತ್ರವಲ್ಲದೆ, ಒಂದೆರಡು ಹನಿ ನಿಂಬೆ ರಸ ಬೆರೆಸಿ ಕುಡಿದರೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ.

ಕಲ್ಮಶ

ಎಳನೀರು ಮತ್ತು ಸಬ್ಜಾ ಬೀಜಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಇವು ಬಹಳಷ್ಟು ಪರಿಣಾಮಕಾರಿ.

ರಿಸಲ್ಟ್

ಈ ಪಾನೀಯವನ್ನು ದಿನಕ್ಕೆ ಎರಡು ಬಾರಿ ಕುಡಿದರೆ ಶೀಘ್ರವೇ ರಿಸಲ್ಟ್ ಗೋಚರಿಸುತ್ತದೆ.

ಸೂಚನೆ

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story