ನೀವೂ ಸಹ ಬಹಳ ಹೊತ್ತು 'ಮೂತ್ರ' ತಡೆಯುತ್ತೀರಾ..! ಈ ಬಗ್ಗೆ ಇರಲಿ ಎಚ್ಚರ...!

Yashaswini V
Aug 30,2024

ಮೂತ್ರ ವಿಸರ್ಜನೆ

ಮೂತ್ರ ವಿಸರ್ಜನೆ ಒಂದು ನೈಸರ್ಗಿಕ ಕ್ರಿಯೆಯಾಗಿದ್ದು ಇದು ದೇಹದಿಂದ ಅನಗತ್ಯ ತ್ಯಾಜ್ಯವನ್ನು ಹೊರಹಾಕುವ ಪ್ರಕ್ರಿಯೆ ಆಗಿದೆ.

ಮೂತ್ರ ಹಿಡಿದಿಟ್ಟುಕೊಳ್ಳುವಿಕೆ

ಕೆಲವೊಮ್ಮೆ ಜಾಗದ ಕಾರಣದಿಂದಲೋ ಅಥವಾ ಪರಿಸ್ಥಿತಿಯಿಂದಾಗಿಯೋ ಮೂತ್ರವನ್ನು ತಡೆಯಬೇಕಾಗುತ್ತದೆ. ಹಾಗಂತ, ಇದನ್ನೇ ಅಭ್ಯಾಸ ಮಾಡಿಕೊಂಡಲ್ಲಿ ಕಾಯಿಲೆಗಳ ಅಪಾಯ ಕಟ್ಟಿಟ್ಟಬುತ್ತಿ.

ಗಂಭೀರ ಆರೋಗ್ಯ ಸಮಸ್ಯೆ

ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವು ಮೂತ್ರದ ಸೋಂಕು, ಮೂತ್ರಪಿಂಡಕ್ಕೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಕಿಡ್ನಿ ಸ್ಟೋನ್

ದೀರ್ಘ ಸಮಯದವರೆಗೆ ಮೂತ್ರ ಹಿಡಿದಿಟ್ಟುಕೊಳ್ಳುವ ಅಭ್ಯಾಸವು ಕಿಡ್ನಿ ಸ್ಟೋನ್ ಸಮಸ್ಯೆಗೆ ಕಾರಣವಾಗಬಹುದು.

ಮೂತ್ರಕೋಶದ ಉರಿಯೂತ

ದೀರ್ಘ ಸಮಯದವರೆಗೆ ಮೂತ್ರ ತಡೆಹಿಡಿಯುವುದರಿಂದ ಇದು ಪ್ರಾಥಮಿಕವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮೂತ್ರಕೋಶದ ಗೋಡೆಗಳ ಉರಿಯೂತಕ್ಕೆ ಕಾರಣವಾಗುತ್ತದೆ.

ಮೂತ್ರನಾಳದ ಸೋಂಕು

ಮೂತ್ರ ತಡೆಯುವುದರಿಂದ ಮೂತ್ರದಲ್ಲಿರುವ ಸೂಕ್ಷ್ಮಾಣು ಜೀವಿಗಳು, ಸೋಂಕುಗಳು ಮೂತ್ರಪಿಂಡಗಳಿಗೂ ಹರಡಬಹುದು.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story