ಚರ್ಮದ ಮೇಲೆ ಕೆಂಪು ಮತ್ತು ಕೀವು ತುಂಬಿದ ಗಂಟುಗಳನ್ನು ಬಾವು ಎಂದು ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಕುರುಗಳು ಎಂತಲೂ ಕರೆಯಲಾಗುತ್ತದೆ. ಈ ರೀತಿ ಮೂಡುವ ಕುರುಗಳಿಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಪರಿಹಾರವಿದೆ.
ಅರಿಶಿನವು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು ಇದು ರಕ್ತವನ್ನು ಶುದ್ದೀಕರಿಸುತ್ತದೆ. ಕಾಲು ಚಮಚ ಅರಿಶಿನ ಪುಡಿಗೆ ಐದಾರು ಹನಿ ನೀರು ಬೆರೆಸಿ ಕುರು ಜಾಗಕ್ಕೆ ಹಚ್ಚಿದರೆ ಮೂರೇ ದಿನದಲ್ಲಿ ಕುರು ಮಾಯವಾಗುತ್ತದೆ.
ಕೊಬ್ಬರಿ ಎಣ್ಣೆಯೊಂದಿಗೆ ಟೀ ಟ್ರೀ ಆಯಿಲ್ ಬೆರೆಸಿ ಪೀಡಿತ ಪ್ರದೇಶಕ್ಕೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಅನ್ವಯಿಸಿ. ಒಂದೇ ವಾರದಲ್ಲಿ ನೋವಿನಿಂದ ಪರಿಹಾರ ಪಡೆಯಬಹುದು.
ಕೊತ್ತಂಬರಿ ಸೊಪ್ಪು ನೈಸರ್ಗಿಕ ಮುಲಾಮು. ಇದನ್ನು ಪೇಸ್ಟ್ ಮಾಡಿ ಪೀಡಿತ ಪ್ರದೇಶಕ್ಕೆ ಹಚ್ಚುವುದರಿಂದ ಕೀವು ಹೊರಬಂದು ಕುರು ಮಾಯವಾಗುತ್ತದೆ.
ಕುರು ನಿವಾರಣೆಗೆ ಅಲೋವೆರಾ ಜೆಲ್ ಅತ್ಯುತ್ತಮ ಔಷಧಿಯಾಗಿದೆ. ಇದಕ್ಕಾಗಿ ಅಲೋವೆರಾ ಜೊತೆ ಅರಿಶಿನ ಮಿಕ್ಸ್ ಮಾಡಿ ಅದನ್ನು ಪೀಡಿತ ಪ್ರದೇಶಕ್ಕೆ ಹಚ್ಚಿರಿ.
ಅಡಿಗೆ ಸೋಡಾದೊಂದಿಗೆ ಉಪ್ಪನ್ನು ಬೆರೆಸಿ ಒಂದು ಕಾಟನ್ ಬಟ್ಟೆಯಲ್ಲಿ ಹಾಕಿ ಅಡುಗೆ ಕುಡಿಯಲ್ಲಿ ಬಿಸಿ ಮಾಡಿ ಕುರು ಜಾಗಕ್ಕೆ ಶಾಖ ನೀಡಿ. ಈ ರೀರಿ ಮಾಡುವುದರಿಂದ ಕೀವು ಹೊರಬಂದು ಕೆಲವೇ ದಿನಗಳಲ್ಲಿ ಕುರು ಮಾಯವಾಗುತ್ತದೆ.
ಶುಂಠಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಊತ, ಕೀವು ರಚನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಶುಂಠಿ ಚಹಾ ತಯಾರಿಸಿ ಅದರಲ್ಲಿ ಬಟ್ಟೆಯನ್ನು ಅದ್ದಿ ಪೀಡಿತ ಪ್ರದೇಶಕ್ಕೆ ಶಾಖ ನೀಡಿ.
ಬೇವು ಆಂಟಿ-ವೈರಲ್ ಮತ್ತು ಆ್ಯಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು ಇದರ ಪೇಸ್ಟ್ ತಯಾರಿಸಿ ಕುರುವಿನ ಮೇಲೆ ಹಚ್ಚಿದರೆ ಅದು ಗುಣವಾಗುತ್ತದೆ.
ಈರುಳ್ಳಿ ಹಾನಿಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ನಿಗ್ರಹಿಸುತ್ತದೆ. ಕುರುಗಳಿಂದ ಪರಿಹಾರಕ್ಕಾಗಿ ಪೀಡಿತ ಪ್ರದೇಶದಲ್ಲಿ ಒಂದೆರಡು ಹನಿ ಈರುಳ್ಳಿ ರಸವನ್ನು ಹಾಕಿ.
ತುಳಸಿ ಎಲೆಗಳಲ್ಲಿಯೂ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ. ಇದರ ರಸ ಬಳಸುವುದರಿಂದ ಕುರು ಬೇಗ ಗುಣವಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.