ಪ್ರತಿದಿನ ಅಡುಗೆಯಲ್ಲಿ ಬಳಸುವ ಹುಣಸೆಹಣ್ಣು ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಹುಣಸೆಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಅನೇಕ ಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ.
ಹುಣಸೆಹಣ್ಣಿನಲ್ಲಿ ವಿಟಮಿನ್ C, B, ಪೊಟಾಸಿಯಂ, ಮೆಗ್ನೀಷಿಯಂ, ಕಬ್ಬಿಣ, ಖನಿಜಾಂಶಗಳು & ಆಂಟಿ-ಆಕ್ಸಿಡೆಂಟ್‌ಳಿಂದ ಸಮೃದ್ಧವಾಗಿವೆ.
ನಾರಿನಂಶ ಹೆಚ್ಚಾಗಿರುವ ಹುಣಸೆಹಣ್ಣು ಸೇವನೆಯಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ.
ಹುಣಸೆಹಣ್ಣು ಕರುಳಿನ ಭಾಗದಲ್ಲಿ ಉತ್ತಮ ಚಲನೆಯನ್ನುಂಟು ಮಾಡುವುದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.
ಹುಣಸೆಹಣ್ಣು ತನ್ನಲ್ಲಿ ಅಪಾರ ಆಂಟಿ ಆಕ್ಸಿಡೆಂಟ್ ಗುಣಗಳನ್ನು ಒಳಗೊಂಡಿರುವುದರಿಂದ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ.
ನಿಯಮಿತವಾಗಿ ಹುಣಸೆಹಣ್ಣು ಸೇವನೆಯಿಂದ ಹೃದಯದ ಕಾಯಿಲೆಯಿಂದ ನಮಗೆ ರಕ್ಷಣೆ ದೊರೆಯುತ್ತದೆ.
ಶುಗರ್ ಹೊಂದಿರುವವರು ತಮ್ಮ ಆಹಾರದಲ್ಲಿ ಹುಣಸೆ ಹಣ್ಣನ್ನು ಬಳಸಿ ಆರೋಗ್ಯಕರ ಗುಣಗಳನ್ನು ಪಡೆದುಕೊಳ್ಳಬಹುದು.