ಹೊಟ್ಟೆಯ ಕೊಬ್ಬನ್ನು ಬೆಣ್ಣೆಯಂತೆ ಕರಗಿಸಬಲ್ಲ 7 ಪಾನೀಯಗಳಿವು

ಬೆಲ್ಲಿ ಫ್ಯಾಟ್

ನೀವು ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಸರಾಗವಾಗಿ ಕರಗಿಸಲು ಯೋಚಿಸುತ್ತಿದ್ದರೆ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾಗ 7 ಪಾನೀಯಗಳು ತುಂಬಾ ಲಾಭದಾಯಕವಾಗಿವೆ.

ನಿಂಬೆ ನೀರು

ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ನಿತ್ಯ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯಕವಾಗಿದೆ.

ಆಪಲ್ ಸೈಡರ್ ವಿನೆಗರ್

ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯುವುದರಿಂದ ದೇಹದಲ್ಲಿ ಶೇಖರವಾಗಿರುವ ಕೊಬ್ಬು ತಾನಾಗಿಯೇ ಕರಗುತ್ತದೆ.

ಗ್ರೀನ್ ಟೀ

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಗ್ರೀನ್ ಟೀ ಹೊಟ್ಟೆಯಲ್ಲಿ ಶೇಖರವಾಗಿರುವ ಕೊಬ್ಬನ್ನು ಸುಲಭವಾಗಿ ಕರಗಿಸಲು ಲಾಭದಾಯಕ ಪಾನೀಯ.

ಮೆಂತ್ಯ ನೀರು

ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಮೆಂತ್ಯ ನೆನೆಸಿತ್ತು ಬೆಳಿಗ್ಗೆ ಎದ್ದು ಈ ನೀರನ್ನು ಕುಡಿಯುವುದರಿಂದ ಇದು ಹಸಿವನ್ನು ನಿಗ್ರಹಿಸಿ, ಚಯಾಪಚಯವನ್ನು ಹೆಚ್ಚಿಸಿ ಹೊಟ್ಟೆಯಲ್ಲಿ ಶೇಖರವಾಗಿರುವ ಕೊಬ್ಬನ್ನು ಕರಗಿಸುತ್ತದೆ.

ಬ್ಲಾಕ್ ಕಾಫಿ

ಬೆಳಿಗ್ಗೆ ಹೊತ್ತು ಬೆಡ್ ಕಾಫಿ ಕುಡಿಯುವ ಅಭ್ಯಾಸ ಇರುವವರು ಹಾಲು, ಸಕ್ಕರೆ ಬಿಟ್ಟು ಕೇವಲ ಬ್ಲಾಕ್ ಕಾಫಿ ಕುಡಿಯುವುದರಿಂದ ಹೊಟ್ಟೆ ಬೆಣ್ಣೆಯಂತೆ ಕರಗುತ್ತೆ.

ಶುಂಠಿ ಟೀ

ಹಾಲು, ಸಕ್ಕರೆ ಬೆರೆಸದೆ ಶುಂಠಿ ಟೀ ತಯಾರಿಸಿ ಕುಡಿಯುವುದರಿಂದ ಇದರಲ್ಲಿರುವ ಥರ್ಮೋಜೆನಿಕ್ ಅಂಶವೂ ವೇಗವಾಗಿ ಕ್ಯಾಲೋರಿಗಳನ್ನು ಸುಡುವ ಮೂಲಕ ಬೆಲ್ಲಿ ಫ್ಯಾಟ್ ಕರಗಿಸುತ್ತದೆ.

ಡಿಟಾಕ್ಸ್ ವಾಟರ್

ನಿಮಗೆ ಬಾಯಾರಿಕೆ ಆದಾಗೆಲ್ಲ ಸಾಧಾರಣ ನೀರು ಕುಡಿಯುವುದಕ್ಕಿಂತ ಸೌತೆಕಾಯಿ, ಪುದೀನ, ನಿಂಬೆ ಬೆರೆಸಿಟ್ಟ ನೀರನ್ನು ಕುಡಿಯುವುದು ಹೊಟ್ಟೆಯನ್ನು ಕರಗಿಸಲು ದಿವ್ಯೌಷಧವಾಗಿ ಕಾರ್ಯನಿರ್ವಹಿಸುತ್ತದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story