ನಿತ್ಯ ಒಂದೆರಡು ಕಪ್ ಬ್ಲಾಕ್ ಕಾಫಿ ಸೇವನೆಯು ಮೆದುಳಿನಲ್ಲಿ ಪ್ರತಿಬಂಧಕ ನರಪ್ರೇಕ್ಷಕಗಳನ್ನು ನಿರ್ಬಂಧಿಸುವ ಮೂಲಕ ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ನೈಸರ್ಗಿಕ ಉತ್ತೇಜಕವಾಗಿದೆ.
ಬ್ಲಾಕ್ ಕಾಫಿ ಸೇವನೆಃಯಿಂದ ನರಮಂಡಲ ಉತ್ತೇಜಿತಗೊಂಡು ಅಡ್ರಿನಾಲಿನ್ ಬಿಡುಗಡೆಯನ್ನು ಹೆಚ್ಚಿಸುವ ಮೂಲಕ ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಬ್ಲಾಕ್ ಕಾಫಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ದೇಹದಲ್ಲಿರುವ ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುವ ಪ್ರಯೋಜನಕಾರಿ ಸಂಯುಕ್ತವಾಗಿದೆ.
ಬ್ಲಾಕ್ ಕಾಫಿ ಸೇವನೆಯು ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ.
ತೂಕ ಇಳಿಕೆ ಪ್ರಕ್ರಿಯೆಯಲ್ಲಿರುವವರಿಗೆ ಬ್ಲಾಕ್ ಕಾಫಿ ಅತ್ಯುತ್ತಮ ಪಾನೀಯವಾಗಿದೆ. ಅದರಲ್ಲೂ, ಶುಗರ್ ಲೆಸ್ ಬ್ಲಾಕ್ ಕಾಫಿ ಸೇವನೆಯು ಆರೋಗ್ಯಕರವಾಗಿ ತೂಕ ಇಳಿಸಲು ತುಂಬಾ ಪ್ರಯೋಜನಕಾರಿ ಆಗಿದೆ.
ಬ್ಲಾಕ್ ಕಾಫಿ ಸೇವನೆಯು ಟೈಪ್ 2 ಡಯಾಬಿಟಿಸ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ.
ನಿಯಮಿತವಾಗಿ ಬ್ಲಾಕ್ ಕಾಫಿ ಸೇವನೆಯು ಕೊಬ್ಬಿನ ಯಕೃತ್ತು ಮತ್ತು ಯಕೃತ್ತಿನ ಫೈಬ್ರೋಸಿಸ್ ಸೇರಿದಂತೆ ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ.
ಬ್ಲಾಕ್ ಕಾಫಿಯ ನಿಯಮಿತ ಸೇವನೆಯು ಯಕೃತ್ತಿನ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ನಂತಹ ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಬ್ಲಾಕ್ ಕಾಫಿ ಸೇವನೆಯಿಂದ ಹೃದ್ರೋಗಗಳ ಅಪಾಯವನ್ನು ಕಡಿಮೆಗೊಳಿಸಬಹುದು ಎಂದು ಹೇಳಲಾಗುತ್ತದೆ.
ನಿಯಮಿತ ಬ್ಲಾಕ್ ಕಾಫಿ ಸೇವನೆಯು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.