ವ್ಯಾಯಾಮದ ರೂಪಗಳಲ್ಲಿ ಒಂದಾದ ಯೋಗಾಸನವು ದೈಹಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ನೀವು ನಿತ್ಯ ಈ ಕೆಳಗೆ ತಿಳಿಸಲಾದ ಯೋಗಾಸನಗಳನ್ನು ಮಾಡುವುದರಿಂದ ಬೆನ್ನು ನೋವಿನಿಂದ ಪರಿಹಾರ ಪಡೆಯಬಹುದು.

ಕ್ಯಾಟ್-ಕೌ ಪೋಸ್

ಈ ಆಸನವು ಬೆನ್ನು ಮತ್ತು ಬುಜದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

ಅಧೋ ಮುಖ ಶ್ವಾನಾಸನ

ನಿತ್ಯ ಅಧೋ ಮುಖ ಶ್ವಾನಾಸನವನ್ನು ಮಾಡುವುದರಿಂದ ಕಿಬ್ಬೊಟ್ಟೆ ಸ್ನಾಯು ಬಲಗೊಳ್ಳುತ್ತದೆ. ಇದರ ಜೊತೆಗೆ ಬೆನ್ನು ನೋವಿನಿಂದಲೂ ಪರಿಹಾರ ದೊರೆಯುತ್ತದೆ.

ತ್ರಿಕೋನಾಸನ

ತ್ರಿಕೋನಾಸನವು ಬೆನ್ನುನೋವು ಮತ್ತು ಕುತ್ತಿಗೆ ನೋವನ್ನು ನಿವಾರಿಸುವ ಪರಿಣಾಮಕಾರಿ ಆಸನ ಎಂದು ಹೇಳಲಾಗುತ್ತದೆ.

ಭುಜಂಗಾಸನ

ಭುಜಂಗಾಸನ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಸಹಕಾರಿ ಮತ್ತು ಬೆನ್ನು ಮೂಲೆಯನ್ನು ಬಳಪಡಿಸುತ್ತದೆ.

ಸೇತು ಬಂಧ ಸರ್ವಾಂಗಾಸನ

ಸೇತು ಬಂಧ ಸರ್ವಾಂಗಾಸನವು ಬೆನ್ನು ನೋವು, ತಲೆನೋವನ್ನು ನಿವಾರಿಸುವ ಪರಿಣಾಮಕಾರಿ ಆಸನಗಳಲ್ಲಿ ಒಂದು.

ಬಾಲಾಸನ

ಮಗುವಿನ ಭಂಗಿ ಎಂತಲೂ ಕರೆಯಲ್ಪಡುವ ಬಾಲಾಸನವು ಬೆನ್ನು ಮೂಳೆಗಳನ್ನು ಹಿಗ್ಗಿಸುವ ಮತ್ತು ಕುಗ್ಗಿಸುವ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಬೆನ್ನು ನೋವು ಶಮನವಾಗುತ್ತದೆ.

ಊರ್ಧ್ವ ಉತ್ತಾನಾಸನ

ಊರ್ಧ್ವ ಉತ್ತಾನಾಸನವು ಬೆನ್ನನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಬೆಂಡ್ ಮಾಡುವ ಭಂಗಿಯಾಗಿದ್ದು ಇದು ಬೆನ್ನು ನೋವಿಗೆ ಪರಿಣಾಮಕಾರಿ ಆಸನವಾಗಿದೆ.

ಮಲಸಾನ

ಮಲಸಾನವು ಚತುರ್ಭುಜ, ಸೊಂಟ, ಮುಂಡ ಮತ್ತು ತೊಡೆಸಂದು ಸೇರಿದಂತೆ ನಿಮ್ಮ ಕೆಳ ಬೆನ್ನಿನ ಪ್ರತಿಯೊಂದು ಭಾಗವನ್ನು ವಿಸ್ತರಿಸುತ್ತದೆ. ಇದರಿಂದ ರಕ್ತ ಪರಿಚಲನೆ ಪುನರುಜ್ಜೀವನಗೊಂಡು ಬೆನ್ನು ನೋವು ನಿವಾರಣೆ ಆಗುತ್ತದೆ.

ಕೋಬ್ರಾ ಪೋಸ್

ಕೋಬ್ರಾ ಪೋಸ್, ಇಲ್ಲವೇ ನಾಗರ ಭಂಗಿಯು ಬೆನ್ನಿನ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ. ಈ ಆಸನ ಮಾಡುವುದರಿಂದ ಬೆನ್ನಿನ ನೋವು ಕಡಿಮೆ ಆಗುತ್ತದೆ.

ಪಾರಿವಾಳದ ಭಂಗಿ

ಪಾರಿವಾಳದ ಭಂಗಿಯು ಹೊಸಭರಿಗೆ ಕೊಂಚ ಕ್ಲಿಷ್ಟಕರವಾದ ಭಂಗಿಯಾಗಿದೆ. ಆದಾಗ್ಯೂ, ಈ ಆಸನ ಮಾಡುವುದರಿಂದ ಬೆನ್ನು ನೋವಿನಿಂದ ಪರಿಹಾರ ಪಡೆಯಬಹುದು.

ವಿಶೇಷ ಸೂಚನೆ

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ. ನಿಮಗೆ ಈಗಾಗಲೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿದ ನಂತರವಷ್ಟೇ ಯೋಗಾಸನವನ್ನು ಮಾಡಿ.

VIEW ALL

Read Next Story