ಮೊಸರನ್ನ ತಾಜಾವಾಗಿಡಲು ಫ್ರಿಜ್ ನಲ್ಲಿ ಇಡಲಾಗುತ್ತದೆ. ಫ್ರಿಜ್ ಇಲ್ಲದೆ ಮೊಸರನ್ನು ತಾಜಾವಾಗಿಡುವ ಸಲಹೆಗಳು ಇಲ್ಲಿವೆ.
ಮೊಸರನ್ನು ಮಣ್ಣಿನ ಪಾತ್ರೆಯಲ್ಲಿ ಇಟ್ಟರೆ ತಾಜಾವಾಗಿರುತ್ತದೆ.
ಮೊಸರು ಹಾಕಲು ಮಣ್ಣಿನ ಮಡಕೆ ಬಳಸುವ ಮೊದಲು ರಾತ್ರಿಯಿಡಿ ನೀರಿನಲ್ಲಿ ನೆನೆಸಿ ಇಡಿ.
ಪಾತ್ರೆಗೆ ಮೊಸರು ಹಾಕುವ ಮೊದಲು ಅದನ್ನು ಒದ್ದೆ ಬಟ್ಟೆಯಿಂದ ಮುಚ್ಚಿ.
ಅಡುಗೆ ಮನೆಯ ಶಾಖದಿಂದ ಮೊಸರನ್ನು ಸಾಧ್ಯವಾದಷ್ಟು ದೂರವಿಡಿ.
ಒಮ್ಮೆ ಮೊಸರನ್ನು ಪಾತ್ರೆಗೆ ಹಾಕಿದ ಮೇಲೆ ಮತ್ತೆ ಮತ್ತೆ ಅದರ ಮುಚ್ಚಳ ತೆರಯಬೇಡಿ.
ಫ್ರಿಜ್ ಇಲ್ಲದಿದ್ದರೆ ಐಸ್ ಬಾಕ್ಸ್ ಬಳಸಬಹುದು.
ಮೊಸರು ತಾಜಾವಾಗಿಡಲು ಗರಿಷ್ಟ ತಾಪಮಾನ 5 ಡಿಗ್ರಿ ಅಥವಾ ಕಡಿಮೆ ಇರಬೇಕು.
ರೆಫ್ರಿಜರೆಟರ್ ಇಲ್ಲದೆ ದೀರ್ಘಕಾಲದವರೆಗೆ ಮೊಸರನ್ನು ತಾಜಾವಾಗಿಡಲು ಈ ಟ್ರಿಕ್ಸ್ ಬಳಸಬಹುದು.