ಮಾರುಕಟ್ಟೆಯಿಂದ ಸೇಬುಗಳನ್ನು ಖರೀದಿಸಲು ಹೋದರೆ, ಸಿಹಿ ಮತ್ತು ಉತ್ತಮವಾದ ಸೇಬುಗಳನ್ನು ಆಯ್ಕೆ ಮಾಡುವುದಕ್ಕೆ ಸಹಾಯ ಮಾಡುವ ಟ್ರಿಕ್ಸ್ ಇಲ್ಲಿದೆ.
ಸೇಬಿನ ತೂಕ ಅದರ ಗಾತ್ರವನ್ನು ಗಮನಿಸಿ. ಸೇಬು ಜಾಸ್ತಿ ತೂಕ ಇದೆ ಎಂದು ಅನ್ನಿಸಿದರೆ ಖರೀದಿಸಬೇಡಿ.
ಸೇಬು ಖರೀದಿಸುವಾಗ ಅದರ ಗುಣಮಟ್ಟಕ್ಕೆ ಒತ್ತು ನೀಡಬೇಕು.
ರುಚಿಕರ ಮತ್ತು ಒಳ್ಳೆಯ ಸೇಬು ಪೂರ್ತಿ ಕೆಂಪು ಬಣ್ಣದ್ದಾಗಿರುವುದಿಲ್ಲ.ಅದು ಸ್ವಲ್ಪ ಕೆಂಪು ಮತ್ತು ಸ್ವಲ್ಪ ಹಸಿರು ಬಣ್ಣದ್ದಾಗಿರುತ್ತದೆ.
ಸೇಬು ಸಿಹಿಯಾಗಿರುವುದೇ ಇಲ್ಲವೇ ಎನ್ನುವುದನ್ನು ಅದರ ಪರಿಮಳದ ಮೂಲಕ ಪತ್ತೆ ಹಚ್ಚಬಹುದು.
ಸೇಬನ್ನು ಫ್ರಿಜ್ ನಲ್ಲಿಟ್ಟರೆ ಅದು ಬಹಳ ಬೇಗನೆ ಕೆಡುತ್ತದೆ. ಆದರೆ ಪೇಪರ್ ನಲ್ಲಿ ಸರಿಯಾಗಿ ಸುತ್ತಿ ಸೇಬನ್ನು ಫ್ರಿಜ್ ನಲ್ಲಿಟ್ಟರೆ ಏನೂ ಆಗುವುದಿಲ್ಲ.
ಹೆಚ್ಚಿನ ಸಂಖ್ಯೆಯಲ್ಲಿ ಸೇಬನ್ನು ಖರೀದಿಸಿ ತಂದಿದ್ದರೆ ಅದನ್ನು ಪೇಪರ್ ಅಥವಾ ಕ್ರಾಫ್ಟ್ ಪೇಪರ್ ನಲ್ಲಿ ಸುತ್ತಿ ಸ್ಟೋರ್ ಮಾಡಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ