ಹೀಗೆ ಮಾಡಿ ನೋಡಿ ನೊಣಗಳ ಕಾಟ ಸಂಪೂರ್ಣವಾಗಿ ತಪ್ಪುವುದು

ನೊಣಗಳ ಕಾಟಕ್ಕೆ ಪರಿಹಾರ

ಮಳೆಗಾಲದಲ್ಲಿ ನೊಣಗಳ ಕಾಟ ಅತಿಯಾಗಿ ಇರುತ್ತದೆ. ಆದರೆ ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಸುಲಭ ಉಪಾಯ ಇಲ್ಲಿದೆ.

ಕರ್ಪೂರ

ಮನೆಯೊಳಗೇ ಕರ್ಪೂರ ಹೊತ್ತಿಸಿ ಇಡೀ ಮನೆಯಲ್ಲಿ ಆ ಪರಿಮಳ ಇರುವಂತೆ ಮಾಡಿ.ನೊಣಗಳು ಹೇಳ ಹೆಸರಿಲ್ಲದೆ ಓಡಿ ಹೋಗುತ್ತದೆ.

ಆಪಲ್ ಸೈಡರ್ ವಿನೆಗರ್

ಒಂದು ಬಾಟಲಿಗೆ ನೀರು ಹಾಕಿ ಅದಕ್ಕೆ ಸ್ವಲ್ಪ ಆಪಲ್ ಸೈಡರ್ ವಿನೆಗರ್ ಸೇರಿಸಿ ಮನೆಯೊಳಗೇ ಸ್ಪ್ರೇ ಮಾಡಿದರೆ ನೊಣಗಳು ಮಾಯವಾಗಿ ಬಿಡುತ್ತವೆ.

ಉಪ್ಪು ನಿಂಬೆ ರಸ

ನೀರಿಗೆ ೨ ಚಮಚ ಉಪ್ಪು ಹಾಕಿ ನಿಂಬೆ ರಸ ಬೆರೆಸಿ ಅದನ್ನು ನೊಣ ಕುಳಿತುಕೊಳ್ಳುವ ಜಾಗದಲ್ಲಿ ಸಿಂಪಡಿಸಿದರೆ ಮತ್ತೆ ನೊಣಗಳು ಬರುವುದಿಲ್ಲ.

ಸಣ್ಣ ಪಲಾವ್ ಎಲೆ

ಒಂದು ಸಣ್ಣ ಪಲಾವ್ ಎಲೆಯನ್ನು ಹೊತ್ತಿಸಿ ಅದನ್ನು ನೊಣಗಳು ಬರುವ ಜಾಗದಲ್ಲಿ ಇರಿಸಿದರೆ ನೊಣಗಳು ಓಡಿ ಹೋಗುತ್ತವೆ.

ಚಕ್ಕೆ

ನೊಣಗಳು ಚಕ್ಕೆಯ ಪರಿಮಳವನ್ನು ಕೂಡಾ ಸಹಿಸುವುದಿಲ್ಲ.ಚಕ್ಕೆಯನ್ನು ತುಂಡು ತುಂಡಾಗಿಸಿ ಅಲ್ಲಲ್ಲಿ ಇಟ್ಟರೆ ನೊಣಗಳು ಬರುವುದಿಲ್ಲ.

ಪುದಿನಾ ಅಥವಾ ಲ್ಯಾವೆಂಡರ್

ಮಳೆಗಾಲದಲ್ಲಿ ಮನೆಯ ಮುಂದೆ ಪುದಿನಾ ಅಥವಾ ಲ್ಯಾವೆಂಡರ್ ಸಸ್ಯವನ್ನು ನೆಟ್ಟರೆ ನೊಣಗಳು ಮನೆಯೊಳಗೇ ಬರುವುದೇ ಇಲ್ಲ.

ಫಿನಾಯಿಲ್

ನೆಲ ಒರೆಸುವ ನೀರಿಗೆ ಸ್ವಲ್ಪ ಫಿನಾಯಿಲ್ ಬೆರೆಸಿ ಉಪಯೋಗಿಸಿದರೆ ನೊಣಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಸೂಚನೆ :ಈ ಸುದ್ದಿ ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ.ಇವುಗಳನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Media ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story