ಅಧಿಕ ತೂಕದಿಂದ ಇಂದು ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ತೂಕ ಇಳಿಸಿಕೊಳ್ಳಲು ಬಹುತೇಕರು ಇಂದು ಇನ್ನಿಲ್ಲದ ಕಸರತ್ತುಗಳನ್ನ ನಡೆಸುತ್ತಿದ್ದಾರೆ.
ಕೆಲವು ಹಣ್ಣು-ತರಕಾರಿಗಳ ಸೇವನೆಯಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.
ತೂಕ ನಷ್ಟ ಮಾಡಿಕೊಳ್ಳುವುದರಿಂದ ಹಿಡಿದು ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಹಣ್ಣು-ತರಕಾರಿಗಳು ಪರಿಣಾಮಕಾರಿ.
ನಿಯಮಿತವಾಗಿ ಸೌತೆಕಾಯಿ ಸೇವನೆಯಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.
ಶೇ.90ರಷ್ಟು ನೀರಿನಂಶ ಹೊಂದಿರುವ ಕಲ್ಲಂಗಡಿ ಹಣ್ಣು ಸೇವನೆಯಿಂದಲೂ ನೀವು ತೂಕ ನಷ್ಟ ಮಾಡಿಕೊಳ್ಳಬಹುದು.
ರಸಭರಿತವಾದ ಪೇರಳೆ ಹಣ್ಣು ಸೇಬಿಗಿಂತ ಶೇ.30ರಷ್ಟು ಹೆಚ್ಚು ಪೊಟ್ಯಾಸಿಯಂ ಹೊಂದಿದ್ದು, ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
ವಿಟಮಿನ್ ʼಎʼ ನಿಂದ ಸಮೃದ್ಧವಾಗಿರುವ ಕರಬೂಜ ಹಣ್ಣು ತಿಂದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ.