ಮಲಗುವ ಮುನ್ನ ಇವುಗಳನ್ನು ತಿಂದರೆ ಗೊರಕೆಯ ಸಮಸ್ಯೆ ಇರುವುದಿಲ್ಲ

ಗೊರಕೆಗೆ ಕಾರಣಗಳು

ಹಲವರಿಗೆ ಜೋರಾಗಿ ಗೊರಕೆ ಹೊಡೆಯುವ ಅಭ್ಯಾಸವಿರುತ್ತದೆ. ಇದರಿಂದ ಅಕ್ಕಪಕ್ಕದಲ್ಲಿ ಮಲಗುವವರ ನಿದ್ದೆ ಕೆಡುತ್ತದೆ. ಅಂದಹಾಗೆ ಗೊರಕೆಗೆ ಹಲವು ಕಾರಣಗಳಿರಬಹುದು. ನಿದ್ದೆ ಮಾಡುವಾಗ ಉಸಿರಾಟದ ವ್ಯವಸ್ಥೆಯಲ್ಲಿ ಅಡಚಣೆ ಉಂಟಾದಾಗ, ದೇಹದ ಆಂತರಿಕ ಜೀವಕೋಶಗಳ ಕಂಪನದಿಂದಾಗಿ, ಆಯಾಸ ಅಥವಾ ಒತ್ತಡದಿಂದಲೂ ಗೊರಕೆ ಹೊಡೆಯುತ್ತಾರೆ.

ಮನೆಮದ್ದು

ಇದಲ್ಲದೆ ಕೆಲವು ಆರೋಗ್ಯ ಸಮಸ್ಯೆಗಳಿಂದಲೂ ಗೊರಕೆ ಬರಬಹುದು. ಆದ್ದರಿಂದ ಇದನ್ನು ನಿರ್ಲಕ್ಷಿಸಬಾರದು. ಗೊರಕೆಯನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳಿವೆ. ಅವುಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿ ಉರಿಯೂತದ ಗುಣಲಕ್ಷಣಗಳು ಕಂಡುಬರುತ್ತವೆ. ಇದು ಊತದ ಸಮಸ್ಯೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ಉಸಿರಾಟದ ತೊಂದರೆ ಇರುವುದಿಲ್ಲ. ಗೊರಕೆಯನ್ನು ಹೋಗಲಾಡಿಸಲು ಆಲಿವ್ ಎಣ್ಣೆ ತುಂಬಾ ಪ್ರಯೋಜನಕಾರಿಯಾಗಿದೆ. ರಾತ್ರಿ ಮಲಗುವ ಮುನ್ನ ಕೆಲವು ಹನಿ ಆಲಿವ್ ಎಣ್ಣೆಯನ್ನು ಮೂಗಿಗೆ ಹಾಕಿಕೊಂಡರೆ ಶೀಘ್ರ ಉಪಶಮನ ಪಡೆಯಬಹುದು.

ತುಪ್ಪ

ಗೊರಕೆ ನಿವಾರಣೆಗೆ ದೇಸಿ ತುಪ್ಪ ಉಪಯುಕ್ತ. ದೇಸಿ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ. ಕೊಂಚ ಹನಿಹಳನ್ನು ಮೂಗಿಗೆ ಹಾಕಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಗೊರಕೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಜೇನುತುಪ್ಪ

ಗೊರಕೆಯ ಸಮಸ್ಯೆಯನ್ನು ಹೋಗಲಾಡಿಸಲು ಜೇನುತುಪ್ಪವು ತುಂಬಾ ಉಪಯುಕ್ತವಾಗಿದೆ. ಇದರಲ್ಲಿರುವ ಉರಿಯೂತ ನಿವಾರಕ ಮತ್ತು ಆಂಟಿ ಮೈಕ್ರೊಬಿಯಲ್ ಗುಣಲಕ್ಷಣಗಳು ಉಸಿರಾಟದ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿಯುವುದರಿಂದ ಶೀಘ್ರ ಪರಿಹಾರ ದೊರೆಯುತ್ತದೆ.

ಅರಿಶಿನ

ಅರಿಶಿನವು ಗೊರಕೆಯನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ. ಉರಿಯೂತದ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಚಿಟಿಕೆ ಅರಿಶಿನದ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಗೊರಕೆಯ ಸಮಸ್ಯೆ ದೂರವಾಗುತ್ತದೆ.

ಬೆಳ್ಳುಳ್ಳಿ

ಸೈನಸ್’ನಿಂದಾಗಿ ಗೊರಕೆ ಸಮಸ್ಯೆಯಾಗಬಹುದು. ಇದಲ್ಲೆ ಬೆಳ್ಳುಳ್ಳಿ ಪ್ರಯೋಜನಕಾರಿ. ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ಎಸಳನ್ನು ಹುರಿದು ಉಗುರುಬೆಚ್ಚಗಿನ ನೀರಿನಲ್ಲಿ ಸೇವಿಸಿದರೆ ಗೊರಕೆಯ ಸಮಸ್ಯೆ ನಿವಾರಣೆಯಾಗುತ್ತದೆ.

ಸೂಚನೆ:

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story