ಅಡುಗೆಮನೆಯಲ್ಲಿ ಸುಲಭವಾಗಿ ಕಂಡುಬರುವ ಪಲಾವ್ ಎಲೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಚಳಿಗಾಲದಲ್ಲಿ, ಹೆಚ್ಚಿನ ಜನರು ಯೂರಿಕ್ ಆಮ್ಲ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ.
ಪಲಾವ್ ಎಲೆಯನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯಬೇಕು.
4 ರಿಂದ 5 ಪಲಾವ್ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಆ ನೀರನ್ನು ಕುಡಿಯಬೇಕು.
ಪಲಾವ್ ಎಲೆಗಳನ್ನು ಒಣಗಿಸಿ, ಆ ಎಲೆಗಳನ್ನು ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಿ. ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯಬಹುದು.
ಯಾವುದೇ ರೀತಿಯ ಪಲ್ಯ, ಸಾಂಬಾರ್ ಮಾಡುವಾಗಲೂ ಪಲಾವ್ ಎಲೆಯನ್ನು ಬಳಸಬಹುದು.
ಪಲಾವ್ ಎಲೆಯನ್ನು ಹಾಗೆಯೇ ತಿಂದರೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇದು ಯೂರಿಕ್ ಆಮ್ಲವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.
ಪಲಾವ್ ಎಲೆಯನ್ನು ನೀರಿನಲ್ಲಿ ಕುದಿಸಿ ಅದೇ ನೀರಿಗೆ ಚಕ್ಕೆಯನ್ನು ಕೂಡಾ ಸೇರಿಸಬಹುದು. ಈ ನೀರು ಯುರಿಕ್ ಆಸಿಡ್ ಅನ್ನು ಬಹಳ ಬೇಗನೆ ನಿಯಂತ್ರಣಕ್ಕೆ ತರುತ್ತದೆ
ತರಕಾರಿಗಳನ್ನು ಬೇಯಿಸಿ ಅದಕ್ಕೆ ಪಲಾವ್ ಎಲೆ ಹಾಕಿ ಸೇವಿಸಬಹುದು.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ