ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಮಾಂಸಾಹಾರಗಳಲ್ಲಿ ನೈಟ್ರೇಟ್‌ಗಳು ಮತ್ತು ನೈಟ್ರೈಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು, ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಹುದು.

ಡೈರಿ ಉತ್ಪನ್ನಗಳು

ಅತಿಯಾದ ಡೈರಿ ಉತ್ಪನ್ನಗಳ ಬಳಕೆಯಿಂದಲೂ ಶ್ವಾಸಕೋಶದಲ್ಲಿ ಉರಿಯೂತ ಉಂಟಾಗುತ್ತದೆ. ದೀರ್ಘಾವಧಿಯಲ್ಲಿ ಈ ಸಮಸ್ಯೆಯೂ ಶ್ವಾಸಕೋಶದ ಅಂಗಾಂಶಗಳನ್ನು ಹಾನಿಗೊಳಿಸುತ್ತದೆ ಮತ್ತು ಕ್ಯಾನ್ಸರ್ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

ಎಣ್ಣೆಯುಕ್ತ ಆಹಾರಗಳು

ಅತಿಯಾದ ಎಣ್ಣೆ ಪದಾರ್ಥಗಳು, ಇಲ್ಲವೇ ಕರಿದ ಆಹಾರಗಳ ಸೇವನೆಯಿಂದಲೂ ಕೂಡ ಅನಾರೋಗ್ಯಕರ ಟ್ರಾನ್ಸ್ ಕೊಬ್ಬುಗಳು ಮತ್ತು ಅಕ್ರಿಲಾಮೈಡ್ ಎಂಬ ರಾಸಾಯನಿಕವು ದೇಹವನ್ನು ಹೊಕ್ಕು ಇದು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ತಂಪು ಪಾನೀಯಗಳು

ಇತ್ತೀಚಿನ ದಿನಗಳಲ್ಲಿ ತಂಪು ಪಾನೀಯಗಳ ಕ್ರೇಜ್ ಜನರಲ್ಲಿ ಹೆಚ್ಚಾಗಿದೆ. ಇದು ತೂಕವನ್ನು ಹೆಚ್ಚಿಸುವುದರ ಜೊತೆಗೆ ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳಿಗೆ ಆಹ್ವಾನ ನೀಡಬಹುದು.

ಕೃತಕ ಸಿಹಿಕಾರಕಗಳು

ಹಲವರು ಆಹಾರ ಪದಾರ್ಥಗಳಲ್ಲಿ ನೇರವಾಗಿ ಸಕ್ಕರೆಯನ್ನು ಬಳಸದೆ ಕೃತಕ ಸಿಹಿಕಾರಕಗಳನ್ನು ಬಳಸುತ್ತಾರೆ. ಇದನ್ನು, ಶ್ವಾಸಕೋಶದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಅಧಿಕ ಸೋಡಿಯಂ

ಸೋಡಿಯಂ ಅಧಿಕವಾಗಿರುವ ಆಹಾರವು ದ್ರವದ ಧಾರಣಕ್ಕೆ ಕಾರಣವಾಗಬಹುದು ಮತ್ತು ಶ್ವಾಸಕೋಶದ ಅಂಗಾಂಶಗಳು ಊದಿಕೊಳ್ಳುವಂತೆ ಮಾಡುತ್ತದೆ. ಅತಿಯಾದ ಸೋಡಿಯಮ್ ಸೇವನೆಯು ಶ್ವಾಸಕೋಶದ ಹಾನಿಗೂ ಕಾರಣವಾಗುತ್ತದೆ.

ಸಂಸ್ಕರಿಸಿದ ಧಾನ್ಯಗಳು

ಈ ವೇಗದ ಜೀವನ ಶೈಲಿಯಲ್ಲಿ ವೈಟ್ ಬ್ರೆಡ್, ವೈಟ್ ರೈಸ್, ಪಾಸ್ತಾದಂತಹ ಸಂಸ್ಕರಿಸಿದ ಧಾನ್ಯಗಳ ಬಳಕೆ ಹೆಚ್ಚಾಗಿದೆ. ಈ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಆಲ್ಕೋಹಾಲ್

ಅತಿಯಾದ ಆಲ್ಕೋಹಾಲ್ ಸೇವನೆಯು ದೀರ್ಘಾವಧಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಉಸಿರಾಟದ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

VIEW ALL

Read Next Story