ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್,‌ ಶಾಸಕ ಬಸವರಾಜ ವಿ.ಶಿವಗಂಗಾ, ಜಿಲ್ಲಾಧಿಕಾರಿ ಗಾಂಗಧರ ಸ್ವಾಮಿ ಜಿ.ಎಂ, ಜಿ.ಪಂ.ಸಿಇಓ ಸುರೇಶ್ ಬಿ. ಇಟ್ನಾಳ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಸಂಗೀತ ಸಂಜೆಯ ಸವಿದರು.

Manjunath Naragund
Jan 05,2025

ಸಂಗೀತ ಸಂಜೆ

ಸವಾರಿ-1 ಚಿತ್ರದ 'ಮರಳಿ ಮರೆಯಾಗಿ' ಪುನೀತ್ ರಾಜಕುಮಾರ್ ಅಭಿನಯದ ಪೃಥ್ವಿ ಚಿತ್ರದ 'ನಿನಗಾಗಿ' ಹೀರೋ ಚಿತ್ರದ ಶಾಕುಂತಲ ನಕ್ಕಳು‌ ಸೇರಿದಂತೆ ಇತರೆ ಗೀತೆಗಳನ್ನು ಸಂಗೀತ ಸಂಜೆಯಲ್ಲಿ ಹಾಡಲಾಯಿತು.

ಐಗಿರಿ ನಂದಿನಿ ಗೀತೆ

ಬಾಲಿವುಡ್‌‌ ಖ್ಯಾತಿಯ ಗಾಯಕಿ ಹಂಸಿಕಾ ಅಯ್ಯರ್, ನಗರ ಅಧಿದೇವತೆ ದುರ್ಗಾಂಭ ದೇವಿ ಸ್ಮರಿಸುತ್ತಾ, ಆದಿಗುರು ಶಂಕರಚಾರ್ಯ ಅವರ ರಚನೆ "ಐಗಿರಿ ನಂದಿನಿ" ಗೀತೆ ಪ್ರಸ್ತುತ ಪಡಿಸಿದರು.ನಂತರ ಸವಾರಿ-2 ಚಿತ್ರದ ಪ್ರಸಿದ್ಧ 'ಗೀತೆ ನಿನ್ನ ಧನಿಗಾಗಿ, ನಿನ್ನ ಕರೆಗಾಗಿ' ಸುಮಧರ ಯುಗಳ ಗೀತೆಯನ್ನ ಹಂಸಿಕಾ ನಾಯರ್ ಸಹ ಕಲಾವಿದರೊಂದಿಗೆ ಹಾಡಿದರು.

ವಿದ್ಯಾರ್ಥಿಗಳ ನೃತ್ಯ

ಸಂಗೀತ ಸಂಜೆ ಕಾರ್ಯಕ್ರಮವನ್ನು ಶ್ರೇಯಾಗೋಷಾಲ್ ಕಂಠಸಿರಿಯಲ್ಲಿ ಮೂಡಿಬಂದ, ಮರಾಠಿಯ ಚಂದಾ ಗೀತೆಯನ್ನು ವಿದ್ಯಾರ್ಥಿಗಳು ಲಾವಣಿ ನೃತ್ಯದೊಂದಿಗೆ ಆರಂಭಿಸಿದರು. ಇದರೊಂದಿಗೆ ಉಪೇಂದ್ರ ಸಿನಿಮಾ ಪ್ರಸಿದ್ಧ ಗೀತೆ ಹಾಗೂ ಅಗ್ನಿಪಥ್ ಚಿತ್ರದ ಗಣೇಶ ಗೀತೆಗಳಿಗೆ ವಿದ್ಯಾರ್ಥಿಗಳು ನೃತ್ಯಮಾಡಿದರು.

ಚಳಿಯಲ್ಲೂ ಕಿಚ್ಚು

ಚಳಿಯಲ್ಲೂ ಬಾಲಿವುಡ್ ಗಾಯಕಿ ಹಂಸಿಕಾ ನಾಯರ್ ಶಾರುಖಾನ್ ರಾ ಒನ್ ಚಿತ್ರದ ಚಮಕ್ ಚಲ್ಲೋ ಗೀತೆ ಹಾಡಿ ಚಳಿಯಲ್ಲೂ ಕಿಚ್ಚು ಹಚ್ಚಿದರು.

ಮಣಿಕಾಂತ್ ಕದ್ರಿ ಮ್ಯುಸಿಕಲ್ ನೈಟ್ಸ್‌

ರಾಜ್ಯಮಟ್ಟದ ಯುವಜನೋತ್ಸವ ಅಂಗವಾಗಿ ನಗರದ ಬಾಪೂಜಿ ಎ.ಬಿ.ಎ ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಲಾದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮ್ಯುಸಿಕಲ್ ನೈಟ್ಸ್‌ಗೆ ಬೆಣ್ಣೆನಗರಿ ಜನ ಕುಣಿದು ಕುಪ್ಪಳಿಸಿದರು.

VIEW ALL

Read Next Story