ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಡ್ಯಾಂಡ್ರಫ್ ನಿಂದ ಹಿಡಿದು ಕೂದಲು ಉದುರುವವರೆಗಿನ ಸಮಸ್ಯೆಗಳು ಕಡಿಮೆಯಾಗುತ್ತವೆ.
ನೆಲ್ಲಿಕಾಯಿ ಎಣ್ಣೆಯು ನೆತ್ತಿಯನ್ನು ಆರೋಗ್ಯವಾಗಿಡಲು ಸಹ ಸಹಾಯ ಮಾಡುತ್ತದೆ.
ನೆಲ್ಲಿಕಾಯಿ ತಿನ್ನುವುದರಿಂದ ದೇಹಕ್ಕೆ ಕೆಲವು ಪ್ರಯೋಜನಗಳಿವೆ. ಅದಕ್ಕಾಗಿಯೇ ವೈದ್ಯರು ಪ್ರತಿದಿನ ಒಂದು ನೆಲ್ಲಿಕಾಯಿಯನ್ನು ತಿನ್ನಲು ಸಲಹೆ ನೀಡುತ್ತಾರೆ.
ನೆಲ್ಲಿಕಾಯಿ ದೇಹಕ್ಕೆ ಮಾತ್ರವಲ್ಲದೆ ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ.
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ವಿಟಮಿನ್ ಸಿ ಕೂದಲಿಗೆ ಅಗತ್ಯವಾದ ಪೋಷಕಾಂಶವಾಗಿದೆ.
ಇಂದಿನ ಕೆಟ್ಟ ಜೀವನಶೈಲಿ ಮತ್ತು ಕೂದಲಿನ ಆರೈಕೆಯ ಕೊರತೆಯು ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ.
ನೆಲ್ಲಿಕಾಯಿಯನ್ನು ಎಣ್ಣೆಯ ರೂಪದಲ್ಲಿ ಹಚ್ಚುವುದರಿಂದ ನೀವು ಉದ್ದ ದಪ್ಪ ಕೂದಲನ್ನು ಪಡೆಯುತ್ತೀರಿ.
ಅಲ್ಲದೆ ಈ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಬೇರುಗಳಿಂದ ಗಟ್ಟಿಯಾಗಿ ಉದ್ದವಾಗುತ್ತದೆ.
ಎಣ್ಣೆ ಮಾಡಲು ಅರ್ಧ ಕಿಲೋ ನೆಲ್ಲಿಕಾಯಿ ಬೇಕು. ಮೊದಲು ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆಯಿರಿ.
ಈಗ ನೆಲ್ಲಿಕಾಯಿಯನ್ನು ಪುಡಿಮಾಡಿ ಅದರ ರಸವನ್ನು ತೆಗೆಯಿರಿ. ನಂತರ ನೆಲ್ಲಿಕಾಯಿ ರಸಕ್ಕೆ ತೆಂಗಿನೆಣ್ಣೆ ಬೆರೆಸಿ. ಈಗ ನೆಲ್ಲಿಕಾಯಿ ಎಣ್ಣೆ ರೆಡಿ.