ಕಾಂತಿಯುತ ತ್ವಚೆಗಾಗಿ ಜೇನನ್ನು ಈ ಪಾನೀಯದೊಂದಿಗೆ ಬೆರೆಸಿ ಹಚ್ಚಿ

Ranjitha R K
Jan 24,2024

ಕಾಂತಿಯುತ ತ್ವಚೆಗಾಗಿ ಏನು ಮಾಡಬೇ

ಜೇನುತುಪ್ಪ ಮತ್ತು ಹಾಲು ಎರಡೂ ಅನೇಕ ರೀತಿಯ ಗುಣಗಳಿಂದ ಸಮೃದ್ಧವಾಗಿವೆ. ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.

ಹಾಲು ಮತ್ತು ಜೇನು

ಒಂದು ಸಣ್ಣ ಬೌಲ್ ನಲ್ಲಿ 2 ಚಮಚ ಹಾಲು ತೆಗದುಕೊಳ್ಳಿ. ಇದಾದ ನಂತರ ಹಾಲಿಗೆ ಒಂದು ಚಮಚ ಜೇನು ತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

ಹಾಲು ಮತ್ತು ಜೇನಿನ ಮಿಶ್ರಣ

ರಾತ್ರಿ ಮಲಗುವ ಮುನ್ನ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಂತರ ಹಾಲು ಮತ್ತು ಜೇನಿನ ಮಿಶ್ರಣವನ್ನು ಮುಖಕ್ಕೆ ಹಚ್ಚಿ.

ಮಸಾಜ್ ಮಾಡಿ

2-3 ನಿಮಿಷಗಳವರೆಗೆ ಮೃದುವಾಗಿ ಮಸಾಜ್ ಮಾಡಿ. ಇದಾದ ನಂತರ ಮಿಶ್ರಣವನ್ನು 20 ನಿಮಿಷಗಳವರೆಗೆ ಮುಖದ ಮೇಲೆ ಹಾಗೆಯೇ ಬಿಡಿ.

ಮುಖವನ್ನು ತೊಳೆಯಿರಿ

ನಂತರ ಸಾಧಾರಣ ನೀರಿನಿಂದ ಮುಖವನ್ನು ತೊಳೆಯಿರಿ. ನಂತರ ಉತ್ತಮ ಗುಣಮಟ್ಟದ ಮಾಯಿಶ್ಚರೈಸಿಂಗ್ ಕ್ರೀಂ ಹಚ್ಚಿ.

ಡ್ರೈನೆಸ್ ದೂರವಾಗುವುದು

ಈ ಮಿಶ್ರಣವನ್ನು ರಾತ್ರಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಡ್ರೈನೆಸ್ ದೂರವಾಗುವುದು .

ಆಂಟಿ ಏಜಿಂಗ್

ಹಾಲಿನಲ್ಲಿ ಆಂಟಿ ಏಜಿಂಗ್ ಗುಣಗಳು ಇರುತ್ತವೆ. ಇದು ಹೆಚ್ಚು ಸಮಯದವರೆಗೆ ತ್ವಚೆಯ ಯೌವನಾವಸ್ಥೆಯನ್ನು ಕಾಪಾಡುತ್ತದೆ.

ನೈಸರ್ಗಿಕ ಕಾಂತಿಗೆ

ಈ ಮಿಶ್ರಣವನ್ನು ಹಚ್ಚುವುದರಿಂದ ತ್ವಚೆಯ ನೈಸರ್ಗಿಕವಾಗಿ ಹೊಳೆಯಲು ಆರಂಭಿಸುತ್ತದೆ. ಇದರೊಂದಿಗೆ ಕಲೆಗಳಿಂದಲೂ ಮುಕ್ತಿ ನೀಡುತ್ತದೆ.


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story