ಜೇನುತುಪ್ಪ ಮತ್ತು ಹಾಲು ಎರಡೂ ಅನೇಕ ರೀತಿಯ ಗುಣಗಳಿಂದ ಸಮೃದ್ಧವಾಗಿವೆ. ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.
ಒಂದು ಸಣ್ಣ ಬೌಲ್ ನಲ್ಲಿ 2 ಚಮಚ ಹಾಲು ತೆಗದುಕೊಳ್ಳಿ. ಇದಾದ ನಂತರ ಹಾಲಿಗೆ ಒಂದು ಚಮಚ ಜೇನು ತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
ರಾತ್ರಿ ಮಲಗುವ ಮುನ್ನ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಂತರ ಹಾಲು ಮತ್ತು ಜೇನಿನ ಮಿಶ್ರಣವನ್ನು ಮುಖಕ್ಕೆ ಹಚ್ಚಿ.
2-3 ನಿಮಿಷಗಳವರೆಗೆ ಮೃದುವಾಗಿ ಮಸಾಜ್ ಮಾಡಿ. ಇದಾದ ನಂತರ ಮಿಶ್ರಣವನ್ನು 20 ನಿಮಿಷಗಳವರೆಗೆ ಮುಖದ ಮೇಲೆ ಹಾಗೆಯೇ ಬಿಡಿ.
ನಂತರ ಸಾಧಾರಣ ನೀರಿನಿಂದ ಮುಖವನ್ನು ತೊಳೆಯಿರಿ. ನಂತರ ಉತ್ತಮ ಗುಣಮಟ್ಟದ ಮಾಯಿಶ್ಚರೈಸಿಂಗ್ ಕ್ರೀಂ ಹಚ್ಚಿ.
ಈ ಮಿಶ್ರಣವನ್ನು ರಾತ್ರಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಡ್ರೈನೆಸ್ ದೂರವಾಗುವುದು .
ಹಾಲಿನಲ್ಲಿ ಆಂಟಿ ಏಜಿಂಗ್ ಗುಣಗಳು ಇರುತ್ತವೆ. ಇದು ಹೆಚ್ಚು ಸಮಯದವರೆಗೆ ತ್ವಚೆಯ ಯೌವನಾವಸ್ಥೆಯನ್ನು ಕಾಪಾಡುತ್ತದೆ.
ಈ ಮಿಶ್ರಣವನ್ನು ಹಚ್ಚುವುದರಿಂದ ತ್ವಚೆಯ ನೈಸರ್ಗಿಕವಾಗಿ ಹೊಳೆಯಲು ಆರಂಭಿಸುತ್ತದೆ. ಇದರೊಂದಿಗೆ ಕಲೆಗಳಿಂದಲೂ ಮುಕ್ತಿ ನೀಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.