ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದಾಗಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿದೆ. ಕೂದಲಿಗೆ ಮೊಟ್ಟೆಯನ್ನು ಹಚ್ಚುವುದರ ಮೂಲಕ ಕೂದಲನ್ನು ಆರೋಗ್ಯವಾಗಿಡಬಹುದು.
ಒಂದು ಮೊಟ್ಟೆಯನ್ನು ಸರಿಯಾಗಿ ಬೀಟ್ ಮಾಡಿ ಅದಕ್ಕೆ 2 ರಿಂದ 3 ಚಮಚ ಮೊಸರು ಬೆರೆಸಿ. ಈಗ ಇದನ್ನು ಸರಿಯಾಗಿ ಮಿಕ್ಸ್ ಮಾಡಿ .
ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ 30 ಬ್ರಿಂದ 40 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಕೂದಲಿಗೆ ಸ್ನಾನ ಮಾಡಿ. ಇದರ ಮೂಲಕ ಕೂದಲು ಬೆಳೆಯುತ್ತದೆ. ಕೂದಲಿನ ಕಾಂತಿ ಕೂಡಾ ಹೆಚ್ಚುತ್ತದೆ.
ಮೊಟ್ಟೆಯನ್ನು ಸರಿಯಾಗಿ ಬೀಟ್ ಮಾಡಿ ಅದಕ್ಕೆ ತೆಂಗಿನಕಾಯಿ ಹಾಲನ್ನು ಸೇರಿಸಿ,. ಈಗ ಇದನ್ನು ಕೂದಲಿಗೆ ಹಚ್ಚಿ.
ಈ ಮಾಸ್ಕ್ ಒಣಗುತ್ತಿದ್ದಂತೆಯೇ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಒಣ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.
ಮೊಟ್ಟೆಯನ್ನು ಸರಿಯಾಗಿ ಬೀಟ್ ಮಾಡಿ, ಅದಕ್ಕೆ ಜೇನು ತುಪ್ಪವನ್ನು ಬೆರೆಸಿ ಮಿಶ್ರಣ ರೆಡಿ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿ 30 ನಿಮಿಷ ಹಾಗೆಯೇ ಬಿಡಿ.
ಈಗ ಕೂದಲಿಗೆ ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ. ಒಣ ಕೂದಲಿನ ಸಮಸ್ಯೆ ಕೂಡಾ ಇರುವುದಿಲ್ಲ.
ಮೊಟ್ಟೆ,ಆಲೋವಿರಾ ಜೆಲ್ ಮತ್ತುತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. 30 ನಿಮಿಷಗಳ ನಂತರ ಕೂದಲು ತೊಳೆಯಿರಿ.
ಈ ಹೇರ್ ಮಾಸ್ಕ್ ಕೂದಲಿನ ಕಾಂತಿಯನ್ನು ಹೆಚ್ಚಿಸುತ್ತದೆ. ಕೂದಲು ರೇಷ್ಮೆಯಂತೆ ನಳನಳಿಸುವಂತೆ ಮಾಡುತ್ತದೆ.