ಇತ್ತೀಚಿನ ದಿನಗಳಲ್ಲಿ ದುಡ್ಡಿದ್ದವನೇ ದೊಡ್ಡಪ್ಪ ಎಂಬಂತಾಗಿದೆ. ಹಣವಿಲ್ಲದಿದ್ದರೆ ಜೀವನದಲ್ಲಿ ಸಮಸ್ಯೆಗಳಿಗೆ ಕೊನೆಯಿರಲ್ಲ. ಇದೇ ಕಾರಣದಿಂದ ಜನರು ಸಂಪತ್ತನ್ನು ಆಕರ್ಷಿಸಲು ಅನೇಕ ಪರಿಹಾರಗಳನ್ನು ಮಾಡುತ್ತಾರೆ.
ನಾವಿಂದು ಸಂಪತ್ತು ಮತ್ತು ಅದೃಷ್ಟವನ್ನು ಹೇಗೆ ಆಕರ್ಷಿಸುವುದು ಎಂಬುದಕ್ಕೆ ಸುಲಭ ವಿಧಾನವನ್ನು ತಿಳಿಸಿಕೊಡಲಿದ್ದೇವೆ. ಈ ಪರಿಹಾರದಿಂದ ನಿಮಗೆ ಹಣದ ಮಳೆಯಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ದೇವಿಯ ಫೋಟೋವನ್ನು ಪರ್ಸ್’ನಲ್ಲಿಟ್ಟರೆ ಸಂಪತ್ತು, ಸಮೃದ್ಧಿ ಆಕರ್ಷಿಸುತ್ತದೆ.
ಇನ್ನು ಕೆಂಪು ಕಾಗದದ ಮೇಲೆ ಇಷ್ಟಾರ್ಥಗಳನ್ನು ಬರೆದು ಕೆಂಪು ರೇಷ್ಮೆ ದಾರದಿಂದ ಕಟ್ಟಿ. ಬಳಿಕ ಅದನ್ನು ನಿಮ್ಮ ಪರ್ಸ್ ಅಥವಾ ಕಮಾನಿನಲ್ಲಿ ಇರಿಸಿ. ಇದು ಕೂಡ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ.
ಅಕ್ಕಿ ಎಂದರೆ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ಅಕ್ಕಿ ಕಾಳುಗಳನ್ನು ಪರ್ಸ್’ನಲ್ಲಿ ಇಟ್ಟುಕೊಂಡರೆ, ಅದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.