ದಿನನಿತ್ಯ ಬಿರಿಯಾನಿ ಎಲೆಯ ಟೀ ಕುಡಿದರೆ ಸಿಗುತ್ತೆ ಈ ಎಲ್ಲ ಲಾಭ
ಬಿರಿಯಾನಿ ಮತ್ತು ಪಲಾವ್ ಮಾಡುವಾಗ ಮಸಾಲೆಯುಕ್ತ ಪರಿಮಳವನ್ನು ನೀಡಲು ಬಿರಿಯಾನಿ ಎಲೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಸಾಮಾನ್ಯವಾಗಿ ಬಿರಿಯಾನಿ ಬೇಯಿಸಲು ಬಳಸುವ ಈ ಎಲೆಯಿಂದ ಮಾಡಿದ ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಉತ್ತಮ ಪರಿಮಳದ ಜೊತೆಗೆ ನಮ್ಮ ದೇಹದಲ್ಲಿನ ವಿವಿಧ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ..
ಬಿರಿಯಾನಿ ಎಲೆಗಳನ್ನು ಸ್ವಚ್ಛವಾಗಿ ತೊಳೆದು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಅವುಗಳನ್ನು ಸೋಸಿಕೊಂಡು ಬೆಚ್ಚಗೆ ಸೇವಿಸಬೇಕು.
ನಿಮಗೆ ಬೇಕಾದರೆ ಸ್ವಲ್ಪ ಜೇನುತುಪ್ಪವನ್ನು ಕೂಡ ಸೇರಿಸಬಹುದು.
ಮಧುಮೇಹ ಸಮಸ್ಯೆ ಇರುವವರು ಬಿರಿಯಾನಿ ಎಲೆಯಿಂದ ತಯಾರಿಸಿದ ಟೀ ಸೇವನೆಯಿಂದ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ.
ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ಜನರು ಬಿರಿಯಾನಿ ಎಲೆಗಳಿಂದ ಮಾಡಿದ ಚಹಾವನ್ನು ಸೇವಿಸಲು ಸಲಹೆ ನೀಡುತ್ತಾರೆ.
ಉಸಿರಾಟದ ತೊಂದರೆ, ಎದೆನೋವು, ಗೊರಕೆ ನೋವು ಮುಂತಾದವುಗಳಿಂದ ಬಳಲುತ್ತಿರುವವರು ಈ ಚಹಾವನ್ನು ಸೇವಿಸುವುದರಿಂದ ಪರಿಹಾರ ಸಿಗುತ್ತದೆ.