ವಿದ್ಯಾರ್ಥಿಗಳು ಮುಂಜಾನೆ ಬೇಗ ಎದ್ದು ಓದಿದರೆ ಒಳ್ಳೆಯದು ಎಂಬೆಲ್ಲಾ ಮಾತುಗಳನ್ನು ಅನೇಕ ಬಾರಿ ನಾವು ಕೇಳಿರುತ್ತೇವೆ. ಆದರೆ ಅದಕ್ಕೆ ನಿಖರವಾದ ಕಾರಣ ತಿಳಿದಿರುವುದಿಲ್ಲ. ಇಂದು ನಾವು ಈ ಪ್ರಶ್ನೆಗೆ ಉತ್ತರವನ್ನು ನೀಡಲಿದ್ದೇವೆ.
ಮುಂಜಾನೆ ಬೇಗ ಎದ್ದು ಓದಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ಬಹಿರಂಗವಾಗಿದೆ. ಜೊತೆಗೆ ಉತ್ತಮ ದಿನಾರಂಭ ಕೂಡ ಸಿಗುತ್ತದೆ.
ಇನ್ನು ಮುಂಜಾನೆ 4 ಗಂಟೆಗೆ ಎದ್ದು 7 ರಿಂದ ಅಥವಾ 9 ರವರೆಗೆ ಓದಿದರೆ ಒಳ್ಳೆಯದು, ಈ ಸಮಯದಲ್ಲಿ ಮೆದುಳು ಮತ್ತು ಮನಸ್ಸು ಶುದ್ಧವಾಗಿರುವ ಕಾರಣ ಓದಿರುವುದು ಮಸ್ತಕದಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ.
ಮುಂಜಾನೆ ಬೇಗ ಎದ್ದು ಓದಿದರೆ ಮೆದುಳು ಮಾನಸಿಕವಾಗಿ ಉತ್ತೇಜನಗೊಂಡು ಕಲಿಕೆಗೆ ಸಹಾಯ ಮಾಡುತ್ತದೆ. ಜೊತೆಗೆ ಒತ್ತಡವೂ ಕೂಡ ಕಡಿಮೆಯಾಗುತ್ತದೆ
ಜ್ಞಾನವನ್ನು ವೃದ್ಧಿಸಲು ಕೂಡ ಈ ಪ್ರಕ್ರಿಯೆ ಉತ್ತಮ. ಹೆಚ್ಚು ಸಮಯ ನಮಗೆ ಸಿಗುವುದರಿಂದ ಗಮನ ಮತ್ತು ಏಕಾಗ್ರತೆಯಿಂದ ಓದಲು ಸುಲಭವಾಗುತ್ತದೆ
ಮತ್ತೊಂದೆಡೆ ಪ್ರಶಾಂತ ವಾತಾವರಣ ಆ ಸಂದರ್ಭದಲ್ಲಿ ಸಿಗುವುದರಿಂದ ಓದಿಗೆ ಹಿತಕಾರಿ ಎನಿಸುತ್ತದೆ
ಮುಂಜಾನೆ ವೇಳೆ ಮೆದುಳಿಗೆ ಗರಿಷ್ಠ ಮಟ್ಟದ ನೆನಪುಗಳನ್ನು ಸಂಗ್ರಹಿಸಿಕೊಳ್ಳುವ ಸಾಮಾರ್ಥ್ಯವಿರುತ್ತದೆ. ಹೀಗಾಗಿ ಆ ಸಂದರ್ಭದಲ್ಲಿ ಓದಿದರೆ ಉತ್ತಮ.
ನಿರಂತರವಾಗಿ ಮುಂಜಾನೆ ಎದ್ದು ಓದುವ ಹವ್ಯಾಸ ರೂಢಿಸಿಕೊಂಡರೆ ಶೈಕ್ಷಣಿಕ ಬದುಕಿನಲ್ಲಿ ಶಿಸ್ತು ಮೂಡುತ್ತದೆ