ಪಿರೀಯೇಡ್ಸ್ ವೇಳೆ ನಿಮ್ಮ ಮೂಡ್ ಸರಿಯಾಗಿಡಲು ಅನುಸರಿಸಿ ಈ ಟಿಪ್ಸ್

Ranjitha R K
Aug 14,2023


ಮಹಿಳೆಯರಿಗೆ, ತಿಂಗಳ 5 ದಿನ ತುಂಬಾ ನೋವಿನಿಂದ ಕೂಡಿರುತ್ತದೆ. ಈ ಸಮಯದಲ್ಲಿ, ಮನಸ್ಥಿತಿಯ ಬದಲಾವಣೆಯಿಂದ ತೊಂದರೆಗೊಳಗಾಗುತ್ತಾಳೆ. ಪಿರಿಯಡ್ಸ್ ಸಮಯದಲ್ಲಿಯೂ ನಿಮ್ಮ ಮೂಡ್ ಅನ್ನು ಸರಿಯಾಗಿ ಇಟ್ಟುಕೊಳ್ಳಲು ಇಲ್ಲಿವೆ ಕೆಲವು ಸಲಹೆಗಳು .


ಪಿರೀಯೇಡ್ಸ್ ವೇಳೆ ಉಂಟಾಗುವ ಮೂಡ್ ಸ್ವಿಂಗ್ ಗಳನ್ನು ನಿರ್ವಹಿಸಲು ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಬಹುದು. ಫಾಲಿಕ್ ಆಸಿಡ್, ವಿಟಮಿನ್ ಬಿ ಮತ್ತು ಕಬ್ಬಿಣದ ಅಂಶಗಳು ಹೇರಳವಾಗಿರುವ ಆಹಾರ ಸೇವಿಸಿ.


ನಿಮ್ಮ ಮೂಡ್ ಅನ್ನು ಸರಿಯಾಗಿ ಇಟ್ಟುಕೊಳ್ಳಲು ಅರಿಶಿನ ಚಹಾವನ್ನು ಕುಡಿಯಬಹುದು. ಇದರಲ್ಲಿರುವ ಕರ್ಕ್ಯುಮಿನ್ ನೋವಿನಿಂದ ಪರಿಹಾರ ನೀಡುತ್ತದೆ.


ಪಿರೀಯೇಡ್ಸ್ ವೇಳೆ ನಿದ್ದೆ ಸರಿಯಾಗಿ ಮಾಡಿ. ಇದರಿಂದ ದೇಹದಲ್ಲಿ ಸಂತೋಷದ ಹಾರ್ಮೋನ್ ಗಳು ಹೆಚ್ಚುತ್ತವೆ.


ಕೆಲವೊಮ್ಮೆ ದೈಹಿಕ ಸಮಸ್ಯೆಗಳು ಕೂಡಾ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೆಶಿಯಂ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳಿ.


ಪಿರೀಯೇಡ್ಸ್ ವೇಳೆ ಯಾವುದಾದರೂ ವಿಷಯದ ಬಗ್ಗೆ ಹೆಚ್ಚು ಯೋಚಿಸುವುದರಿಂದ ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.


ಒತ್ತಡ ಕಡಿಮೆ ಮಾಡಲು ಧ್ಯಾನ, ಯೋಗ, ವ್ಯಾಯಾಮಗಳನ್ನು ಮಾಡಿ. ಇದು ಭಾವನಾತ್ಮಕ ಸಮತೋಲನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.


ಧ್ಯಾನ ವ್ಯಾಯಾಮದಿಂದ ಸಿರೋಟೋನಿನ್ ಮತ್ತು ಡಿಪಮೈನ್ ಬಿಡುಗಡೆಯಾಗುತ್ತದೆ. ಇದು ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ.


ಈ ರೀತಿಯಾಗಿ ಪಿರೀಯೇಡ್ಸ್ ವೇಳೆ ನಿಮ್ಮ ಮೂಡ್ ಅನ್ನು ಸರಿಯಾಗಿ ಇಟ್ಟುಕೊಳ್ಳಬಹುದು.

VIEW ALL

Read Next Story