ಹುಣಸೆ ರಸವನ್ನು ಈ ರೀತಿ ಬಳಸಿದರೆ ಮೊಣಕಾಲುದ್ದ ಬೆಳೆಯುತ್ತೆ ದಷ್ಟಪುಷ್ಟ ಕಪ್ಪುಕೂದಲು!

ಮನೆಮದ್ದು

ಬದಲಾಗುತ್ತಿರುವ ಜೀವನಶೈಲಿಯಿಂದ ಅನೇಕ ಜನರು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೂದಲು ಆರೋಗ್ಯವಾಗಿರಲು ಮನೆಮದ್ದುಗಳನ್ನು ಅನುಸರಿಸಬೇಕು ಎನ್ನುತ್ತಾರೆ ಆಯುರ್ವೇದ ತಜ್ಞರು.

ಕೂದಲಿನ ಆರೈಕೆ

ಕೂದಲಿನ ಆರೈಕೆಯಲ್ಲಿ ಹುಣಸೆ ಹಣ್ಣು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಹಣ್ಣಿನ ರಸದ ಗುಣಲಕ್ಷಣಗಳು ಕೂದಲು ಉದುರುವಿಕೆ, ಕೂದಲು ಶುಷ್ಕತೆ ಮತ್ತು ಹಾನಿಯಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದಲ್ಲದೆ, ಹುಣಸೆ ಹಣ್ಣು ಉತ್ಕರ್ಷಣ ನಿರೋಧಕ ಅಂಶಗಳಿಂದ ಸಮೃದ್ಧವಾಗಿದೆ.

ನೆತ್ತಿ ಸ್ವಚ್ಛ

ಹುಣಸೆ ಹಣ್ಣಿನಲ್ಲಿರುವ ವಿಟಮಿನ್ ಸಿ ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ರಾತ್ರಿಯಿಡಿ ಇಡಿ. ಬೆಳಿಗ್ಗೆ ಚೆನ್ನಾಗಿ ಅರೆದು ಈ ನೀರನ್ನು ಕೂದಲಿಗೆ ಹಚ್ಚಿ. ಅರ್ಧ ಘಂಟೆಯ ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ.

ಮೃದು ಕೂದಲು

ಕೂದಲು ಮೃದುವಾಗಿರಲು ಹುಣಸೆ ಹಣ್ಣಿನ ರಸವನ್ನು ಬಳಸಬಹುದು. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಹುಣಸೆ ಹಣ್ಣಿನ ರಸವನ್ನು ತೆಗೆದುಕೊಳ್ಳಿ. ಅಲೋವೆರಾ ಜೆಲ್ ಅನ್ನು ಇದಕ್ಕೆ ಬೆರೆಸಿ ಕೂದಲಿಗೆ ಹಚ್ಚಿ. ಈ ಮಿಶ್ರಣ ಒಣಗಿದ ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.

ಕೂದಲಿನ ಬೆಳವಣಿಗೆ

ಹುಣಸೆ ಹಣ್ಣಿನ ರಸ ಕೂದಲಿನ ಬೆಳವಣಿಗೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೂದಲಿಗೆ ಈ ರಸವನ್ನು ನಿಯಮಿತವಾಗಿ ಮಸಾಜ್ ಮಾಡುವುದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಕಾರಣದಿಂದಾಗಿ ಕೂದಲು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ.

ಕೂದಲು ಉದುರುವಿಕೆ

ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ ಹುಣಸೆ ಹಣ್ಣಿನ ರಸವನ್ನು ಬಳಸಿ ಚಿಟಿಕೆಯಲ್ಲಿ ಸಮಸ್ಯೆಯನ್ನು ಪರಿಹರಿಸಬಹುದು. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ʼಗಳು, ಸತು ಮತ್ತು ಕಬ್ಬಿಣಾಂಶವು ಕೂದಲನ್ನು ಬೇರಿನಿಂದ ಗಟ್ಟಿಗೊಳಿಸಿ ಕೂದಲು ಉದುರುವುದನ್ನು ತಡೆಯುತ್ತದೆ.

ಸೂಚನೆ

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು, ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ತೆಗೆದುಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಪರಿಶೀಲಿಸಿಲ್ಲ.

VIEW ALL

Read Next Story