ಗುಪ್ತಾಂಗದಲ್ಲಿನ ತುರಿಕೆ ಸಮಸ್ಯೆ ಕಡಿಮೆ ಮಾಡಲು ಈ ಮನೆಮದ್ದುಗಳು ಒಳ್ಳೆಯದು

ತುರಿಕೆ ಸಮಸ್ಯೆಗೆ ಮನೆಮದ್ದು

ಯೋನಿ ಅಥವಾ ಗುಪ್ತಾಂಗದಲ್ಲಿ ತುರಿಕೆ ಸಮಸ್ಯೆ ಹೆಚ್ಚಾಗಿ ಮಹಿಳೆಯರನ್ನು ಕಾಡುವ ಸಮಸ್ಯೆ. ಸಾಬೂನಿನ ಅತಿಯಾದ ಬಳಕೆ, ಕಾಸ್ಮೆಟಿಕ್ ಕ್ರೀಮ್’ಗಳ ಅತಿಯಾದ ಬಳಕೆ ಮತ್ತು ಟಾಯ್ಲೆಟ್ ಪೇಪರ್ ಬಳಸುವುದರಿಂದ ಯೋನಿಯಲ್ಲಿ ತುರಿಕೆ ಸಮಸ್ಯೆಗಳು ಕಾಣಿಸುತ್ತವೆ.

ತುರಿಕೆ ಸಮಸ್ಯೆಗೆ ಕಾರಣ

ಉದಾಹರಣೆಗೆ ಋತುಬಂಧಕ್ಕೆ ಪರಿವರ್ತನೆಯ ಸಮಯದಲ್ಲಿ, ಈಸ್ಟ್ರೊಜೆನ್ ಮಟ್ಟದಲ್ಲಿನ ಏರಿಳಿತಗಳಿಂದ ಮಹಿಳೆಯರ ಗುಪ್ತಾಂಗದಲ್ಲಿ ತುರಿಕೆ ಕಾಣಿಸಿಕೊಳ್ಳಬಹುದು. ಯೋನಿಯ ತುರಿಕೆಗೆ ಒತ್ತಡವೂ ಕಾರಣ ಎಂಬುದು ಹಲವು ಸಂಶೋಧನೆಗಳಲ್ಲಿ ಬಹಿರಂಗವಾಗಿದೆ.

ತುರಿಕೆ ಸಮಸ್ಯೆಗೆ ಮನೆಮದ್ದು

ಯೋನಿ ತುರಿಕೆ ತುಂಬಾ ಸಾಮಾನ್ಯವಾದ ವಿಷಯ. ಇನ್ನು ಯೋನಿ ತುರಿಕೆ ಸಮಸ್ಯೆ ತಡೆಯಲು ನಾವಿಂದು ಕೆಲ ಮನೆಮದ್ದುಗಳನ್ನು ಹೇಳಲಿದ್ದೇವೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯು ಯೀಸ್ಟ್ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಹೀಗಾಗಿ ಗುಪ್ತಾಂಗಕ್ಕೆ ಇದನ್ನು ಹಚ್ಚಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆಯನ್ನು ಸಹ ಯೋನಿ ತುರಿಕೆಗೆ ಬಳಸಬಹುದು. ಇದರ ಆಂಟಿಫಂಗಲ್ ಗುಣಲಕ್ಷಣಗಳು ಅನೇಕ ವಿಧದ ಯೀಸ್ಟ್ ಮತ್ತು ಶಿಲೀಂಧ್ರಗಳನ್ನು ಕೊಲ್ಲುತ್ತವೆ. 2-3 ಹನಿ ಟೀ ಟ್ರೀ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಯೋನಿಯ ಹೊರ ಚರ್ಮದ ಮೇಲೆ ಹಚ್ಚಿ ಮಸಾಜ್ ಮಾಡಿ. ಇದರಿಂದ ನಿಮಗೆ ಮುಕ್ತಿ ಸಿಗುವುದು ಖಂಡಿತ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ಬೆರೆಸಿದ ನೀರಿನಲ್ಲಿ ಸ್ನಾನ ಮಾಡಿದರೆ ಸೋಂಕು ಅಥವಾ ತುರಿಕೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story