ಈ ತರಕಾರಿಗಳನ್ನು ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು

ಆರೋಗ್ಯಕ್ಕೆ ಹಸಿರು ತರಕಾರಿಗಳನ್ನು ಸೇವಿಸಲೇ ಬೇಕು. ಇನ್ನು ಮನೆಯಲ್ಲಿಯೇ ಬೆಳೆಸಿದ ತರಕಾರಿಗಳು ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಮೆಣಸಿನ ಕಾಯಿ ಬಳಸದ ಅಡುಗೆಯೇ ಇಲ್ಲ. ನಿತ್ಯ ಅಡುಗೆಯಲ್ಲಿ ಮೆಣಸಿನ ಕಾಯಿಯನ್ನು ಬಳಸಲಾಗುತ್ತದೆ. ಇದನ್ನು ಮನೆಯಲ್ಲಿಯೇ ಬೆಳೆಸಬಹುದು.

ತೋಟದಲ್ಲಿ ಅಥವಾ ಪಾಟ್ ನಲ್ಲಿ ಸುಲಭವಾಗಿ ಟೊಮೇಟೊ ಹಣ್ಣನ್ನು ಬೆಳೆಸಬಹುದು.

ಬದನೆಕಾಯಿ ಬೆಳೆಯಲು ಕೂಡ ವಿಶೇಷ ಕಾಳಜಿಯ ಅಗತ್ಯವಿಲ್ಲ.

ಕೊತ್ತಂಬರಿ ಬೀಜಗಳನ್ನು ತೋಟ ಅಥವಾ ಪಾಟ್ ನಲ್ಲಿ ಹಾಕುವ ಮೂಲಕ ಕೊತ್ತಂಬರಿ ಸೊಪ್ಪನ್ನು ಸುಲಭವಾಗಿ ಬೆಳೆಯಬಹುದು.

ಸಲಾಡ್ ವಿಷಯಕ್ಕೆ ಬಂದಾಗ ತಲೆಗೆ ಬರುವ ಮೊದಲ ತರಕಾರಿಯೇ ಸೌತೆಕಾಯಿ. ಇದು ಪೋಷಕಾಂಶಗಳ ಆಗರ. ಇದನ್ನೂ ಸುಲಭವಾಗಿ ಬೆಳೆಯಬಹುದು.

ಹಸಿರು ಸೊಪ್ಪು ತರಕಾರಿಗಳು ಆರೋಗ್ಯಕ್ಕೆ ಸಹಕಾರಿ. ಇವುಗಳನ್ನು ಕೂಡಾ ಮನೆಯಲ್ಲಿಯೇ ಬೆಳೆಯಬಹುದು.

ಮೂಲಂಗಿ ಅತ್ಯಂತ ಆರೋಗ್ಯಕರ ತರಕಾರಿ. ಇದು ಕೂಡಾ ಮನೆಯ ತೋಟದಲ್ಲಿ ಆರಾಮಾಗಿ ಬೆಳೆಯುತ್ತದೆ.

ನೀವು ಕೂಡಾ ಈ ಮೇಲಿನ ತರಕಾರಿಗಳನ್ನು ಮನೆಯಲ್ಲಿ ಸುಲಭವಾಗಿ ಬೆಳೆಯಲು ಪ್ರಯತ್ನಿಸಬಹುದು.

VIEW ALL

Read Next Story