ಕರ್ಪೂರವನ್ನು ಈ ಎಣ್ಣೆ ಜೊತೆ ಅರೆದು ಹಚ್ಚಿದರೆ ಸೊಂಟ ದಾಟಿ ಕಡು ಕಪ್ಪಾಗಿ ಬೆಳೆಯುತ್ತೆ ಕೂದಲು!
ಕೂದಲು ಉದ್ದ ದಪ್ಪವಾಗಿದ್ದರೆ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಒತ್ತಡಭರಿತ ಜೀವನಶೈಲಿಯಿಂದ ಕೂದಲಿನ ಆರೈಕೆ ಮಡುವುದು ತುಂಬಾ ಕಷ್ಟದ ಕೆಲಸ.
ಕರ್ಪೂರ ಉದ್ದ ದಪ್ಪ ಕೂದಲು ಬರಲು ಸಹಕಾರಿಯಾಗಿದೆ. ಕರ್ಪೂರದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
ಒಂದೆರಡು ಕರ್ಪೂರವನ್ನು ತೆಂಗಿನ ಎಣ್ಣೆಯ ಜೊತೆ ಅರೆದು ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ಸ್ವಲ್ಪ ನೆತ್ತಿಗೆ ತಟ್ಟಿ ಬಳಿಕ ಕೂದಲಿನ ತುದಿಯವರೆಗೆ ಹಚ್ಚಬೇಕು.
ಕರ್ಪೂರದ ಎಣ್ಣೆಯನ್ನು ಹಚ್ಚಿ 20 ರಿಂದ 30 ನಿಮಿಷಗಳ ಕಾಲ ಬಿಟ್ಟ ನಂತರ ಕೂದಲನ್ನು ಶಾಂಪೂವಿನಿಂದ ತೊಳೆಯಬೇಕು.
ಕರ್ಪೂರದ ಎಣ್ಣೆ ನೆತ್ತಿಯ ಚರ್ಮದಲ್ಲಿ ರಕ್ತ ಸಂಚಾರವನ್ನು ಸುಧಾರಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಕರ್ಪೂರ ಆರ್ಧ್ರಕ ಗುಣಗಳನ್ನು ಹೊಂದಿರುವ ಕಾರಣ ಶುಷ್ಕತೆಯನ್ನು ತೆಗೆದುಹಾಕುತ್ತದೆ ಜೊತೆಗೆ ಸ್ಪ್ಲಿಟ್ ಹೆಡ್ಸ್ ಆಗುವುದಿಲ್ಲ.
ಕರ್ಪೂರ ಆಂಟಿಫಂಗಲ್ ಗುಣ ಹೊಂದಿದ್ದು, ತಲೆಹೊಟ್ಟನ್ನು ನಿವಾರಿಸುತ್ತದೆ. ಇದು ಯಾವುದೇ ರೀತಿಯ ಸೋಂಕು ತಲೆಗೆ ತಗುಲದಂತೆ ನೋಡಿಕೊಳ್ಳುತ್ತದೆ.
ಕೂದಲು ಹೆಚ್ಚು ಉದುರುತ್ತಿದ್ದರೆ ಕರ್ಪೂರ ಎಣ್ಣೆಯನ್ನು ಬಳಸಬೇಕು, ಇದರಿಂದ ಕೂದಲಿನ ಬೇರು ಗಟ್ಟಿಗೊಳ್ಳುತ್ತವೆ. ಬಲಗೊಳ್ಳುತ್ತವೆ.
ಕರ್ಪೂರದ ಪುಡಿಯನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆ ಕೂಡ ತಲೆದೋರುವುದಿಲ್ಲ.