ಬೆಳಗ್ಗೆ ಹೊತ್ತು ಬಿಸಿ ಬಿಸಿ ನೀರನ್ನು ಸ್ನಾನ ಮಾಡಬೇಕೆಂಬುದು ಅನೇಕರ ಬಯಕೆ.
ಇದು ಹಲವರಿಗೆ ಅಭ್ಯಾಸವಾಗಿ ಬಿಟ್ಟಿರುತ್ತೆ.
ಆದರೆ ಇತ್ತಿಚಿನ ಜೀವನ ಶೈಲಿಯಲ್ಲಿ ಹೆಚ್ಚಾಗಿ ಜನರು ಗೀಜರ್ ಬಳಸಿ ನೀರನ್ನು ಬಿಸಿ ಮಾಡುತ್ತಾರೆ.
ಎರಡು ವರ್ಷಗಳ ಕಾಲ 26 ಜನರ ಮೇಲೆ ನಡೆದ ಸಂಶೋಧನೆಯೊಂದು ಬೆಚ್ಚಿ ಬೀಳಿಸುವ ಸತ್ಯವನ್ನು ಬಿಚ್ಚಿಟ್ಟಿದೆ.
ಗ್ಯಾಸ್ ಗೀಜರ್ ಬಳಸಿ ಸ್ನಾನ ಮಾಡುವವರ ಆರೋಗ್ಯದಲ್ಲಿ ವಿವಿಧ ರೀತಿಯ ವ್ಯತ್ಯಾಸ ಕಂಡುಬಂದಿದೆ.
ಕೆಲವರ ಮನೆಗಳಲ್ಲಿ ತಾರಸಿಗೆ ಚಿಮಣಿ ಹಾಕದೆ ಗ್ಯಾಸ್ ಗೀಜರ್ ಕೂಡಿಸಿರುತ್ತಾರೆ.
ಇದರಿಂದ ಕಾರ್ಬನ್ ಮಾನಾಕ್ಸೈಡ್ ಜನರ ದೇಹ ಸೇರುವ ಸಾಧ್ಯತೆ ಇರುತ್ತದೆ.
ಇದರಿಂದಾಗಿ ಕೆಲವು ಜನರಿಗೆ ಪಾರ್ಕಿನ್ಸನ್ ರೋಗಲಕ್ಷಣಗಳಿಗೆ ಕಾರಣವಾಗಬಹುದು.
ಸಿಲಿಂಡರ್ ನಿಂದ ಬಿಡುಗಡೆಯಾದ ಗ್ಯಾಸ್ ಬಾತ್ ರೂಮ್ ನಲ್ಲಿ ಇರುವಂತಹ ಗಾಳಿಯನ್ನು ತೆಗೆದುಕೊಂಡು ನಂತರ ಕಾರ್ಬನ್ ಮಾನಾಕ್ಸೈಡ್ ಬಿಡುಗಡೆ ಮಾಡುತ್ತದೆ.
ಅಲ್ಲಿಂದ ಮನುಷ್ಯರಿಗೆ ಕಾಯಿಲೆಗಳು ಆರಂಭವಾಗಬಹುದು.