ಎಚ್ಚರ! ಈ ಆಹಾರಗಳನ್ನು ಅತಿಯಾಗಿ ತಿಂದರೂ ಕೂದಲು ಉದುರುತ್ತದೆ..!

ಕೂದಲು ಉದುರುವಿಕೆ

ಮಾಲಿನ್ಯ, ಒತ್ತಡಭರಿತ ಜೀವನಶೈಲಿ ಹೀಗೆ ಕೂದಲು ಉದುರುವಿಕೆಗೆ ನಾನಾ ಕಾರಣಗಳಿವೆ.

ಆಹಾರದಿಂದ ಹೇರ್ ಫಾಲ್

ಆದಾಗ್ಯೂ, ನಾವು ತೆಗೆದುಕೊಳ್ಳುವ ಆಹಾರದಿಂದಲೂ ಕೂದಲು ಉದುರುವ ಸಂಭವ ಹೆಚ್ಚಾಗಿರುತ್ತದೆ.

ಪಿಜ್ಜಾ, ಕೇಕ್

ಪಿಜ್ಜಾ, ಕೇಕ್ ಗಳಲ್ಲಿ ಸಂಸ್ಕರಿಸಿ ಕಾರ್ಬೋಹೈಡ್ರೆಟ್ ಹೆಚ್ಚಾಗಿರುವುದರಿಂದ ಇದು ಕೂದಲು ಉದುರುವಿಕೆಗೆ ಕಾರಣವಾಗಿರಬಹುದು.

ಬಾದಾಮಿ

ಬಾದಾಮಿಯಲ್ಲಿ ಸೆಲೆನಿಯಮ್ ಎಂಬ ಅಂಶ ಹೇರಳವಾಗಿರುವುದರಿಂದ ಇದರ ಅತಿಯಾದ ಸೇವನೆ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ಸಕ್ಕರೆ

ಅತಿಯಾದ ಸಕ್ಕರೆ ತಿನ್ನುವವರಲ್ಲಿ ತೂಕ ಹೆಚ್ಚಳ, ಡಯಾಬಿಟಿಸ್ ಅಷ್ಟೇ ಅಲ್ಲ ಕೂದಲು ಉದುರುವಿಕೆ ಸಾಧ್ಯತೆಯೂ ಅಧಿಕವಾಗಿರುತ್ತದೆ.

ಕೆಚಪ್

ತರಕಾರಿ ಬಿಟ್ಟು ಪ್ರತಿಯೊಂದಕ್ಕೂ ಕೆಚಪ್ ಹಾಕಿ ತಿನ್ನುವವರಲ್ಲಿ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಇದು ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಆಲ್ಕೋಹಾಲ್

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಣಕ ಅಂತ ನಿಮಗೆ ತಿಳಿದೇ ಇದೆ. ಆದರೆ, ಇದು ನಿಮ್ಮ ಕೂದಲು ಉದುರುವಿಕೆಗೂ ಪ್ರಮುಖ ಕಾರಣವಾಗಬಹುದು.

ಆಹಾರ ಪದ್ದತಿ

ನೀವು ಕೂದಲು ಉದುರುವಿಕೆಯನ್ನು ತಪ್ಪಿಸಬೇಕೆಂದರೆ ನೀವು ತೆಗೆದುಕೊಳ್ಳುವ ಆಹಾರದ ಬಗ್ಗೆ ನಿಗಾವಹಿಸಿ. ಕೂದಲ ಬೆಳವಣಿಗೆಗೆ ಸಹಕಾರಿಯಾಗುವ ಆಹಾರಗಳನ್ನು ಹೆಚ್ಚು ಸೇವಿಸಿ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story