ಕುತ್ತಿಗೆ ಸುತ್ತಲಿನ ಕಪ್ಪುಕಲೆ ನಿವಾರಣೆಗೆ 5 ಮನೆಮದ್ದು
ಮುಖಕ್ಕೆ ಹೊಲಿಸಿದರೆ ಕುತ್ತಿಗೆ ಭಾಗ ಕಪ್ಪಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಮುಖಕ್ಕೆ ಕಾಳಜಿ ವಹಿಸುವಷ್ಟು ಕುತ್ತಿಗೆ ಭಾಗಕ್ಕೆ ಕಾಳಜಿ ವಹಿಸದೇ ಇರುವುದು.
ಕುತ್ತಿಗೆ ಸುತ್ತಲಿನ ಕಪ್ಪುಕಲೆ ನಿವಾರಿಸಲು ಪ್ರಯೋಜನಕಾರಿಯಾದ ಕೆಲವು ಮನೆಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಹಾಲು ಅತ್ಯುತ್ತಮ ಕ್ಲೆನ್ಸರ್ ಮತ್ತು ಟೋನರ್. ಒಂದು ಹತ್ತಿ ಉಂಡೆಯ ಸಹಾಯದಿಂದ ಹಾಲನ್ನು ಕುತ್ತಿಗೆ ಸುತ್ತ ಹಚ್ಚಿ ಲಘುವಾಗಿ ಮಸಾಜ್ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಕುತ್ತಿಗೆ ಸುತ್ತಲಿನ ಕಪ್ಪು ಕಲೆ ಮಂಗಮಾಯವಾಗುತ್ತದೆ.
ಆಲಿವ್ ಎಣ್ಣೆಗೆ ಸಕ್ಕರೆಯನ್ನು ಬೆರೆಸಿ, ಅದನ್ನು ಪೀಡಿತ ಪ್ರದೇಶದಲ್ಲಿ ಹಚ್ಚಿ ನಿಧಾನವಾಗಿ ಉಜ್ಜಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಕುತ್ತಿಗೆ ಸುತ್ತಲಿನ ಕಪ್ಪುಕಲೆ ನಿವಾರಣೆಯಾಗುತ್ತದೆ.
ನಿಂಬೆ ರಸವನ್ನು ಬ್ಲೀಚಿಂಗ್ ಏಜೆಂಟ್ ಎಂದು ಕರೆಯಲಾಗುತ್ತದೆ. ಇದನ್ನು ಕುತ್ತಿಗೆ ಸುತ್ತ ಹಚ್ಚಿ ಲಘುವಾಗಿ ಮಸಾಜ್ ಮಾಡುವುದರಿಂದ ಶೀಘ್ರದಲ್ಲೇ ನಿರೀಕ್ಷಿತ ಫಲಿತಾಂಶವನ್ನು ಕಾಣಬಹುದು.
ನೀವು ಮನೆಯಿಂದ ಹೊರಗೆ ಹೋಗುವಾಗಲೆಲ್ಲಾ ಮುಖದ ಜೊತೆಗೆ ಕುತ್ತಿಗೆ ಭಾಗಕ್ಕೂ ಸನ್‌ಸ್ಕ್ರೀನ್ ಹಚ್ಚಿ. ಇದರಿಂದ ಕುತ್ತಿಗೆ ಭಾಗ ಸನ್‌ಬರ್ನ್‌ನಿಂದ ಕಪ್ಪಗಾಗುವುದನ್ನು ತಪ್ಪಿಸಬಹುದು.
ಅಕ್ಕಿ ರವೆಯೊಂದಿಗೆ ಹಾಲನ್ನು ಬೆರೆಸಿ ಒಂದೆರಡು ನಿಮಿಷಗಳ ಬಳಿಕ ಅದನ್ನು ಕುತ್ತಿಗೆ ಸುತ್ತಲೂ ಹಚ್ಚಿ ಲಘುವಾಗಿ ಮಸಾಜ್ ಮಾಡಿ. ಇದರಿಂದ ಕುತ್ತಿಗೆ ಸುತ್ತಲಿನ ಕಪ್ಪು ಕಲೆಯನ್ನು ಕೆಲವೇ ದಿನಗಳಲ್ಲಿ ನಿವಾರಿಸಬಹುದು.
ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.