ಈ ವಸ್ತು ಹಾಕಿದ 15 ದಿನಗಳಲ್ಲಿ ಗಿಡ ತುಂಬಾ ಅರಳಿ ಕಂಪು ಸೂಸುವುದು ಮಲ್ಲಿಗೆ ಹೂವು

ಮಲ್ಲಿಗೆ ಸುಗಂಧ

ಮನೆಯಲ್ಲಿ ಒಂದು ಮಲ್ಲಿಗೆ ಗಿಡ ನೆಟ್ಟರೂ ಸಾಕು, ಮನೆಯಿಡೀ ಅದ್ಭುತವಾದ ಸುಗಂಧ ಹರಡುತ್ತದೆ.ಆದರೆ ಈ ಗಿಡ ಹೂವು ಬಿಡದೆ ಹೋದಾಗ ಮನಸ್ಸಿಗೆ ಬೇಜಾರಾಗುತ್ತದೆ.

ಈ ವಿಧಾನ

ಮನೆಯ ಮಲ್ಲಿಗೆ ಗಿಡ ಹೇರಳವಾಗಿ ಹೂ ಬಿಡುವಂತೆ ಆಗಬೇಕು ಎಂದಾದರೆ ಕೆಲವು ವಿಧಾನಗಳನ್ನು ಅನುಸರಿಸಬೇಕು.

ಸೂರ್ಯನ ಬಿಸಿಲು :

ಮಲ್ಲಿಗೆ ಗಿಡಕ್ಕೆ ಸೂರ್ಯನ ಬಿಸಿಲು ಅಗತ್ಯ. ಈ ಗಿಡಕ್ಕೆ 5 ರಿಂದ 6 ಗಂಟೆಗಳ ಕಾಲ ಸೂರ್ಯ ಕಿರಣ ಬೇಕು.

ಪ್ಲಾಸ್ಟಿಕ್ ಕುಂಡ ಬೇಡ

ಮಲ್ಲಿಗೆ ಗಿಡಗಳನ್ನು ಪ್ಲಾಸ್ಟಿಕ್ ಕುಂಡಗಳಲ್ಲಿ ಇಡಬಾರದು. ಈ ಗಿಡಗಳನ್ನು ಬಿಸಿಲಿನಲ್ಲಿ ಇಡಬೇಕಾದ ಕಾರಣ, ಪ್ಲಾಸ್ಟಿಕ್ ಕುಂಡ ಬಿಸಿಯಾಗುತ್ತದೆ. ಅದರಿಂದ ಬೇರುಗಳಿಗೆ ಹಾನಿಯಾಗುತ್ತದೆ.

ಪೋಷಕಾಂಶಗಳು ಅಗತ್ಯ

ಮಲ್ಲಿಗೆ ಹೂಗಳಿಗೆ ಸಾಕಷ್ಟು ಪೋಷಕಾಂಶಗಳ ಅಗತ್ಯ ಇರುತ್ತದೆ. ಈ ಗಿಡ ನೆದುವಾಗಲೇ ಮಣ್ಣಿನೊಂದಿಗೆ ಎರೆಹುಳು ಗೊಬ್ಬರಕ್ಕೆ ಶೇಕಡಾ 50 ರಷ್ಟು ಸೆಗಣಿಯನ್ನು ಮಿಶ್ರನ ಮಾಡಿ ಹಾಕಬೇಕು.ತಿಂಗಳಿಗೊಮ್ಮೆ ಗೊಬ್ಬರ ಹಾಕಲೇ ಬೇಕು.

ಮಲ್ಲಿಗೆ ಹೂವಿನ ವಿಂಗಡನೆ ಅಗತ್ಯ

ಮಲ್ಲಿಗೆ ಮೊಗ್ಗು ಅರಳಿ, ಉದುರಿದಾಗ ಅದರ ಬೀಜಕೋಶ ಹಾಗೆಯೇ ಉಳಿಯುತ್ತದೆ. ಮಲ್ಲಿಗೆ ಗಿಡದ ಕೊಂಬೆಯ ಭಾಗದಲ್ಲಿ ಎರಡು ಎಲೆಗಳ ಮಧ್ಯದ ತೊಟ್ಟನ್ನು ಕತ್ತರಿಸಿ ತೆಗೆಯಬೇಕು.ಆಗ ಹೊಸ ಕೊಂಬೆಗಳು ಬೆಳೆದು ಮತ್ತಷ್ಟು ಹೂವು ಬಿಡುತ್ತದೆ.

ಎಪ್ಸಮ್ ಉಪ್ಪು ಸೇರಿಸಿ

ಎರಡು ಲೀಟರ್ ನೀರಿಗೆ ಒಂದು ಟೀ ಚಮಚ ಎಪ್ಸಮ್ ಉಪ್ಪು ಸೇರಿಸಿ, ಕದಡಿ. ಮಲ್ಲಿಗೆ ಗಿಡಗಳಿಗೆ ಸುರಿಯಿರಿ.ಹೀಗೆ ಮಾಡುವುದರಿಂದ ನಿಮ್ಮ ಮಲ್ಲಿಗೆ ಗಿಡ ಚೆನ್ನಾಗಿ ಹೂ ಕೊಡುತ್ತದೆ.

ಗಿಡ ಒಣಗದಂತೆ ನೋಡಿಕೊಳ್ಳಿ

ನಿಮ್ಮ ಮಲ್ಲಿಗೆ ಗಿಡ ಬದುಕಬೇಕು ಮತ್ತು ಚೆನ್ನಾಗಿ ಹೂ ಬಿಡಬೇಕು ಎಂದಾದಲ್ಲಿ, ಅದರ ಬುಡದ ಮಣ್ಣನ್ನು ಒಣಗಲು ಬಿಡಬೇಡಿ.

ಈ ಎಲ್ಲಾ ನಿಯಮಗಳನ್ನು ಅನುಸರಿಸಿದರೆ ನಿಮ್ಮ ಮಲ್ಲಿಗೆ ಗಿಡ ಕೇವಲ ಹೆಚ್ಚು ಹೂಗಳನ್ನು ಬಿಡುವುದು ಮಾತ್ರವಲ್ಲ, ಆರೋಗ್ಯವಾಗಿ ಕೂಡ ಇರುತ್ತದೆ.

VIEW ALL

Read Next Story