ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತೂಕ ಹೆಚ್ಚಳವಾಗುತ್ತಿದೆ. ಹೆಚ್ಚಿನ ತೂಕ ಇಳಿಸಲು ವ್ಯಾಯಾಮ ಮತ್ತು ವಾಕಿಂಗ್ ಮಾಡುವುದನ್ನು ನೋಡಬಹುದು. ಆದರೆ ತೂಕ ಕಳೆದುಕೊಳ್ಳಲು ಎಷ್ಟು ದೈಹಿಕ ಚಟುವಟಿಕೆ ಅಗತ್ಯವೋ ಆಹಾರವೂ ಅಷ್ಟೇ ಮುಖ್ಯ ಎನ್ನುತ್ತಾರೆ ಪೌಷ್ಟಿಕತಜ್ಞರು.
ತೂಕ ಇಳಿಸಿಕೊಳ್ಳಲು ಬಯಸುವವರು ದಾಳಿಂಬೆ ರಸವನ್ನು ಸೇವಿಸಿದರೆ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು. ಸಾಮಾನ್ಯವಾಗಿ, ದಾಳಿಂಬೆ ತಿನ್ನುವುದಕ್ಕಿಂತ ಅದರ ಜ್ಯೂಸ್ ಕುಡಿಯುವುದು ತುಂಬಾ ಪ್ರಯೋಜನಕಾರಿ
ದಾಳಿಂಬೆಯು ಆಂಟಿಆಕ್ಸಿಡೆಂಟ್ಗಳು, ಪಾಲಿಫಿನಾಲ್ಗಳು ಮತ್ತು ಲಿನೋಲೆನಿಕ್ ಆಮ್ಲಗಳಂತಹ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಇವು ಚಯಾಪಚಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಇದು ಕೊಬ್ಬನ್ನು ಸುಡುವ ಸೂಪರ್ ಪವರ್ʼನಂತೆ ಕೆಲಸ ಮಾಡುತ್ತದೆ.
ತೂಕ ಇಳಿಸುವಲ್ಲಿ ಹಸಿವು ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ತಿನ್ನಬೇಕೆಂದುಕೊಂಡರೂ ಸಹ, ಹೆಚ್ಚು ತಿನ್ನುತ್ತೇವೆ. ಅಂತಹ ಸಮಯದಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಹಸಿವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದರಿಂದ ಅಧಿಕ ತೂಕದ ಸಮಸ್ಯೆ ದೂರವಾಗುತ್ತದೆ.
ದಾಳಿಂಬೆ ರಸವು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಕೆಲವು ವರದಿಗಳ ಪ್ರಕಾರ, 100 ಗ್ರಾಂ ದಾಳಿಂಬೆ ಬೀಜಗಳು ಕೇವಲ 83 ಕ್ಯಾಲೊರಿಗಳನ್ನು ಹೊಂದಿರುತ್ತವೆ. ಈ ಕ್ಯಾಲೋರಿಗಳು ಕಾರ್ಬೋಹೈಡ್ರೇಟ್ಗಳಿಂದಲೂ ಬರುತ್ತವೆ. ಹಾಗಾಗಿ ಈ ಜ್ಯೂಸ್ ನಿಂದ ಕಡಿಮೆ ಕ್ಯಾಲೋರಿ ಸೇವನೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ದಾಳಿಂಬೆ ನೈಸರ್ಗಿಕವಾಗಿ ಸಿಹಿಯಾಗಿರುತ್ತದೆ. ಆದ್ದರಿಂದ ನೀವು ಪ್ಯಾಕ್ ಮಾಡಿದ ಜ್ಯೂಸ್, ಕೋಲಾ, ಸೋಡಾ ಇತ್ಯಾದಿಗಳಿಗೆ ಪರ್ಯಾಯವಾಗಿ ದಾಳಿಂಬೆ ರಸವನ್ನು ಕುಡಿಯಬಹುದು.
ಮಧ್ಯಮ ಗಾತ್ರದ ದಾಳಿಂಬೆ 10 ಗ್ರಾಂ ಆಹಾರದ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ ತೆಗೆದುಕೊಂಡ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.