ಈ ಹಣ್ಣುಗಳ ಸಿಪ್ಪೆಯಿಂದಲೂ ನಿಮ್ಮ ಬ್ಯೂಟಿ ಹೆಚ್ಚಿಸಬಹುದು!

Yashaswini V
May 20,2024

ಹಣ್ಣುಗಳ ಸಿಪ್ಪೆ

ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನೀವು ಕೇಳಿರಬಹುದು. ಆದರೆ, ಹಣ್ಣುಗಳಷ್ಟೇ ಅಲ್ಲ ಅವುಗಳ ಸಿಪ್ಪೆಗಳು ಕೂಡ ಆರೋಗ್ಯಕ್ಕೆ ಅದರಲ್ಲೂ ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.

ಬಾಳೆಹಣ್ಣಿನ ಸಿಪ್ಪೆಗಳು

ಬಾಳೆಹಣ್ಣಿನ ಸಿಪ್ಪೆಯಿಂದ ಮುಖವನ್ನು ಮಸಾಜ್ ಮಾಡಿದರೆ ಅಷ್ಟೇ ಸಾಕು. ಚರ್ಮದ ಟೋನ್ ಸುಧಾರಿಸಲು ಬಾಳೆಹಣ್ಣಿನ ಸಿಪ್ಪೆಗಳು ತುಂಬಾ ಪ್ರಯೋಜನಕಾರಿ.

ಸೌತೆಕಾಯಿ ಸಿಪ್ಪೆ

ಸೌತೆಕಾಯಿ ಸಿಪ್ಪೆಯನ್ನು ಒಣಗಿಸಿ ಅದರಲ್ಲಿ ನಿಂಬೆ ಹಣ್ಣು ಬೆರೆಸಿ ಪೇಸ್ಟ್ ತಯಾರಿಸಿ ಅಲೋವೆರಾ ಜೆಲ್ ಜೊತೆಗೆ ಮುಖಕ್ಕೆ ಹಚ್ಚಿ, ಅದು ಡ್ರೈ ಆದ ಬಳಿಕ ಮುಖ ತೊಳೆಯುವುದರಿಂದ ಕಾಂತಿಯುತ ಚರ್ಮ ನಿಮ್ಮದಾಗಿಸಬಹುದು.

ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಅದರ ಪೌಡರ್ ತಯಾರಿಸಿಕೊಳ್ಳಿ. ಈ ಪುಡಿಜೊತೆಗೆ ಹಸಿ ಹಾಲನ್ನು ಬೆರೆಸಿ ಮುಖಕ್ಕೆ ಮಸಾಜ್ ಮಾಡುವುದರಿಂದ ಡೆಡ್ ಸ್ಕಿನ್ ಸಮಸ್ಯೆ ನಿವಾರಿಸಬಹುದು.

ಪಪ್ಪಾಯಿ ಸಿಪ್ಪೆ

ಪಪ್ಪಾಯಿ ಸಿಪ್ಪೆಯನ್ನು ತೆಗೆದುಕೊಂಡು ಮುಖಕ್ಕೆ ಮಸಾಜ್ ಮಾಡಿ 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡುವುದರಿಂದ ಮುಖದ ಕಾಂತಿಯನ್ನು ಮರಳಿ ಪಡೆಯಬಹುದು.

ನಿಂಬೆ ಸಿಪ್ಪೆ

ನಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಡಿ. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಕಲೆರಹಿತ ಚರ್ಮವನ್ನು ಪಡೆಯಬಹುದು.

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story