ಉಳಿದಿರುವ ಅನ್ನ ಬಳಸಿ ತಯಾರು ಮಾಡಿ ಈ ಟೇಸ್ಟಿ ಸ್ನಾಕ್

Ranjitha R K
May 20,2024

ಮಿಕ್ಕಿದ ಅನ್ನದ ಸ್ನಾಕ್

ಬಹಳಷ್ಟು ಸಾರಿ ಮಾಡಿರುವ ಅನ್ನ ಮಿಕ್ಕಿ ಬಿಡುತ್ತದೆ. ಇದನ್ನು ಮತ್ತೆ ತಿನ್ನಲು ಇಷ್ಟವಿಲ್ಲ ಎಂದಾದರೆ ಎಸೆಯಲು ಹೋಗಬೇಡಿ. ಈ ಮಿಕ್ಕಿದ ಅನ್ನವನ್ನು ಬಳಸಿ ರುಚಿಕರ ಸ್ನಾಕ್ ಮಾಡಬಹುದು.

ಬೇಕಾಗುವ ಸಾಮಗ್ರಿ

ಅನ್ನ, ಬೇಯಿಸಿದ ಆಲೂಗಡ್ಡೆ, ನೀರುಳ್ಳಿ, ಶುಂಟಿ, ಮೆಣಸಿನ ಕಾಯಿ, ಶಿಮ್ಲಾ ಮಿರ್ಚ್, ಆಮ್ ಚೂರ್ ಪೌಡರ್, ಖಾರದ ಪುಡಿ, ಅರಶಿನ, ಗರಂ ಮಸಾಲ, ಉಪ್ಪು, ಎಣ್ಣೆ

ಹಂತ ೧

ಮೊದಲಿಗೆ ಬೇಯಿಸಿದ ಆಲೂಗಡ್ಡೆ ಮತ್ತು ಮಿಕ್ಕಿರುವ ಅನ್ನವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಹಂತ ೨

ಈ ಮಿಶ್ರಣಕ್ಕೆ ಮೇಲೆ ಹೇಳಿರುವ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಚೆನಾಗಿ ಕಲಸಿ ಕೊಳ್ಳಿ.

ಹಂತ ೩ :

ನಂತರ ಈ ಮಿಶ್ರಣಕ್ಕೆ ೩ ರಿಂದ ೪ ಚಮಚ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ನಂತರ ಕೈಯ್ಯಲ್ಲಿ ಸ್ವಲ್ಪ ಎಣ್ಣೆ ಹಚ್ಚಿ ಉಂಡೆ ಮಾಡಿಕೊಳ್ಳಿ.

ಹಂತ ೪ :

ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಲು ಇಡಿ. ಎಣ್ಣೆ ಕಾದ ನಂತರ ಮಿಶ್ರಣದಿಂದ ಟಿಕ್ಕಿ ಮಾಡಿ ಕರಿಯಿರಿ.

ಹಂತ ೫ :

ಇದನ್ನು ೫ ನಿಮಿಷಗಳವರೆಗೆ ಮಂದ ಉರಿಯಲ್ಲಿ ಬೇಯಿಸಿ. ಇದರ ಕಲರ್ ಗೋಲ್ಡನ್ ಬ್ರೌನ್ ಗೆ ತಿರುಗಿದಾಗ ಎಣ್ಣೆಯಿಂದ ಹೊರ ತೆಗೆಯಿರಿ.

ಹಂತ ೬ :

ಈಗ ಮಿಕ್ಕಿದ ಅನ್ನದ ಕಟ್ ಲೇಟ ತಯಾರಾಗುತ್ತದೆ. ಇದನ್ನು ಬಿಸಿ ಇರುವಾಗಲೇ ಹಸಿರು ಚಟ್ನಿಯೊಂದಿಗೆ ತಿನ್ನಲು ನೀಡಿ.


ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story