ಕೂದಲು ಬೆಳೆಯಬೇಕಾದರೆ ಕೂದಲಿಗೆ ಎಣ್ಣೆ ಹಚ್ಚಬೇಕು. ಆದರೆ ವಾರಕ್ಕೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು ಎನ್ನುವುದು ಕೂಡಾ ಮುಖ್ಯ.
ಕೂದಲಿಗೆ ಎಣ್ಣೆ ಹಚ್ಚುವುದರಿಂದ ನೆತ್ತಿಯಲ್ಲಿನ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಇದರಿಂದ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ.
ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲ ಮಾಯಿಶ್ಚರೈಸಿಂಗ್ ಮತ್ತು ಹೈಡ್ರೇಟ್ ಆಗಿ ಉಳಿಯುತ್ತದೆ.
ಸಾಮಾನ್ಯದಿಂದ ಒಣ ಕೂದಲಿಗೆ ವಾರದಲ್ಲಿ ಒಂದರಿಂದ ಎರಡು ಬಾರಿ ಎಣ್ಣೆ ಹಚ್ಚಬೇಕು.ಹೆಚ್ಚು ಸಮಸ್ಯೆ ಇದ್ದರೆ ವಾರದಲ್ಲಿ ಎರಡರಿಂದ ಮೂರು ಬಾರಿ ಎಣ್ಣೆ ಹಚ್ಚಬೇಕು.
ನಿಮ್ಮ ಕೂದಲು ಅತಿ ಹೆಚ್ಚು ಆಯಿಲಿ ಆಗಿದ್ದರೆ ವಾರಕ್ಕೆ ಒಂದು ಬಾರಿ ಎಣ್ಣೆ ಹಚ್ಚಿದರೆ ಸಾಕು.
ತಲೆಗೆ ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಸ್ನಾನ ಮಾಡಬೇಕು.
ಕೂದಲಿಗೆ ಹೆಚ್ಚು ಸ್ಟ್ರಾಂಗ್ ಇರುವ ಶಾಂಪೂ ಬಳಸಿದರೆ ಅದು ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಹಾಗಾಗಿ ಯಾವತ್ತೂ ಮೈಲ್ಡ್ ಶಾಂಪೂ ಬಳಸಿ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.zee kannada news ಇದನ್ನು ಖಚಿತಪಡಿಸುವುದಿಲ್ಲ.