ಅನೇಕ ಜನರು ಪೇರಳೆ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಪೇರಳೆ ಹಣ್ಣನ್ನು ಸೇವಿಸಲು ಇಷ್ಟವಿಲ್ಲ ಎಂದಾದರೆ ಈ ಹಣ್ಣಿನ ರುಚಿಕರ ಜ್ಯೂಸ್ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು : ಪೇರಳೆ -2, ಸಕ್ಕರೆ -2 ಚಮಚ, ಬ್ಲಾಕ್ ಸಾಲ್ಟ್ - ರುಚಿಗೆ ತಕ್ಕಂತೆ, ನೀರು -ಒಂದು ಲೋಟ
ಮೊದಲು ಪೇರಳೆ ಹಣ್ಣನ್ನು ಸಣ್ಣ ಸಣ್ಣ ತುಂಡುಗಳಾಗಿ ಕಟ್ ಮಾಡಿಕೊಳ್ಳಿ.
ಈಗ ಮಿಕ್ಸಿಗೆ ಪೇರಳೆ ಹಣ್ಣು, ಸಕ್ಕರೆ, ಬ್ಲಾಕ್ ಸಾಲ್ಟ್ ಮತ್ತು ಒಂದು ಲೋಟ ತಣ್ಣನೆಯ ನೀರನ್ನು ಹಾಕಿ.
ಜ್ಯೂಸ್ ಅನ್ನು ತಣ್ಣಗೆ ಮಾಡಲು ಎರಡು ಮೂರು ತುಂಡು ಐಸ್ ತುಂಡುಗಳನ್ನು ಹಾಕಿ. ನಂತರ ಎಲ್ಲಾ ವಸ್ತುಗಳನ್ನು ಒಟ್ಟಿಗೆ ರುಬ್ಬಿಕೊಳ್ಳಿ.
ನಂತರ ಈ ಜ್ಯೂಸ್ ಅನ್ನು ಸರಿಯಾಗಿ ಶೋಧಿಸಿಕೊಳ್ಳಿ.
ಈ ಜ್ಯೂಸ್ ಅನ್ನು ಅಲಂಕಾರ ಮಾಡಲು ಪುದೀನಾ ಎಲೆಗಳನ್ನು ಬಳಸಿ.
ಪೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ತ್ವಚೆ ಕೂಡಾ ಕಾಂತಿಯುಕ್ತವಾಗುತ್ತದೆ.
ಈ ಜ್ಯೂಸ್ ಅನ್ನು ಮನೆಯಲ್ಲಿ ಸುಲಭವಾಗಿ 10 ರಿಂದ 15 ನಿಮಿಷಗಳೊಳಗೆ ತಯಾರಿಸಬಹುದು.