ಫ್ರಿಜ್ ನಿಂದ ಶಬ್ದ ಬರುತ್ತಿದ್ದರೆ ತಕ್ಷಣ ಹೀಗೆ ಮಾಡಿ

ಫ್ರಿಜ್ ನಿಂದ ಜೋರಾಗಿ ಶಬ್ದ ಬರುತ್ತಿದ್ದರೆ ಕಡೆಗಣಿಸಬೇಡಿ. ತಕ್ಷಣ ಎಚ್ಚೆತ್ತುಕೊಳ್ಳಿ.

ಫ್ರಿಜ್ ನ ಕೆಲ ಭಾಗದಲ್ಲಿ ಶಬ್ದ ಕೇಳಿ ಬರುತ್ತಿದ್ದರೆ ಡ್ರೈನ್ ಪ್ಯಾನ್ ಇದಕ್ಕೆ ಕಾರಣವಾಗಿರಬಹುದು.

ಡ್ರೈನ್ ಪ್ಯಾನ್ ಕಾರಣದಿಂದ ಈ ಸದ್ದು ಬರುತ್ತಿದ್ದರೆ ಸರಿಯಾಗಿ ಅದನ್ನು ಅಡ್ಜೆಸ್ಟ್ ಮಾಡುವ ಮೂಲಕ ಸರಿಪಡಿಸಬಹುದು.

ಫ್ರಿಜ್ ನ ಹಿಂಭಾಗದಲ್ಲಿ ಈ ಸದ್ದು ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣ ಕಂಡೆನ್ಸರ್ ಫ್ಯಾನ್ ಅಥವಾ ಕಂಪ್ರೆಸರ್ ಆಗಿರಬಹುದು.

ಕಂಪ್ರೆಸರ್ ಅನ್ನು ಮೃದುವಾದ ಬ್ರೆಶ್ ನಲ್ಲಿ ಕ್ಲೀನ್ ಮಾಡುವ ಮೂಲಕ ಈ ಸದ್ದನ್ನು ಕಡಿಮೆ ಮಾಡಬಹುದು.

ಇಷ್ಟು ಶುಚಿಗೊಳಿಸಿದ ಮೇಲೆ ಕೂಡಾ ಸದ್ದು ಬರುತ್ತಿದ್ದರೆ ಟೆಕ್ನಿಷಿಯನ್ ಅನ್ನು ಕರೆಯಿಸುವುದು ಸೂಕ್ತ.

ಫ್ರಿಜ್ ಒಳಗೆ ಪಟಪಟ ಸದ್ದು ಬರುತ್ತಿದ್ದರೆ ಸರ್ಕ್ಯುಲೇಶನ್ ಫ್ಯಾನ್ ಇದಕ್ಕೆ ಕಾರಣವಾಗಿರಬಹುದು.

ಸರ್ಕ್ಯುಲೇಶನ್ ಫ್ಯಾನ್ ಕಾರಣದಿಂದ ಈ ಶಬ್ದ ಬರುತ್ತಿದ್ದರೆ ಅದನ್ನು ಬದಲಿಸಬಹುದು.

ಫ್ರಿಜ್ ನಿಂದ ಬರುವ ಸದ್ದು ಹಕ್ಕಿಗಳ ಚಿಲಿಪಿಲಿಯಂತೆ ಕೇಳಿಸುತ್ತಿದ್ದರೆ ಇವ್ಯಾಪರೆಟರ್ ಫ್ಯಾನ್ ಕೆಟ್ಟು ಹೋಗಿದೆ ಎಂದರ್ಥ. ಇದನ್ನು ಸರಿ ಮಾಡಿಸದಿದ್ದರೆ ಫ್ರಿಜ್ ಸರಿಯಾಗಿ ಕೂಲಿಂಗ್ ಆಗುವುದಿಲ್ಲ.

VIEW ALL

Read Next Story