ಆಚಾರ್ಯ ಚಾಣಕ್ಯರ ಪ್ರಕಾರ, ನಿತ್ಯ ಬೆಳಿಗ್ಗೆ ಕೆಲವು ಕೆಲಸಗಳನ್ನು ಮಾಡುವುದರಿಂದ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಸಂಪತ್ತು ಎಂದಿಗೂ ಕಡಿಮೆಯಾಗುವುದಿಲ್ಲ.
ಮುಂಜಾನೆ ಸೂರ್ಯೋದಯಕ್ಕೂ ಮೊದಲೇ ಏಳುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಅಂತಹವರ ದೇಹದಲ್ಲಿ ಧನಾತ್ಮಕತೆ ತುಂಬುತ್ತದೆ.
ನಿತ್ಯ ನಿಮ್ಮನ್ನಷ್ಟೇ ಅಲ್ಲ ನಿಮ್ಮ ಮನೆಯನ್ನೂ ಕೂಡ ಸ್ವಚ್ಛವಾಗಿರಿಸಬೇಕು. ಸ್ವಚ್ಛತೆ ಇರುವೆಡೆ ಲಕ್ಷ್ಮಿ ನೆಲೆಸುತ್ತಾಳೆ.
ಬೆಳಿಗ್ಗೆ ಸ್ನಾನವಿಧಿ ಮುಗಿದ ಬಳಿಕ ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸಿ. ಬಳಿಕ ನಿಮ್ಮ ಕೆಲಸವನ್ನು ಆರಂಭಿಸಿ.
ತುಳಸಿ ಸಸ್ಯದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಹೊರಗಡೆ ಹೋಗುವಾಗ ತುಳಸಿಗೆ ಭಕ್ತಿಯಿಂದ ನಮಿಸಿ ತೆರಳಿದರೆ ಕಾರ್ಯ ಸಿದ್ದಿಯಾಗುತ್ತದೆ.
ಆಚಾರ್ಯ ಚಾಣಕ್ಯರ ಪ್ರಕಾರ, ನಾವು ದುಡಿಯುವ ದುಡಿಮೆ ನ್ಯಾಯವಾಗಿದ್ದಲ್ಲಿ ಮಾತ್ರ ಲಕ್ಷ್ಮಿ ನಮ್ಮೊಂದಿಗೆ ನೆಲೆಸುತ್ತಾಳೆ. ಅನ್ಯಾಯದಿಂದ ಸಂಪಾದಿಸಿದ ಹಣ ಎಷ್ಟು ದುಡಿದರೂ ಕೈಯಲ್ಲಿ ನಿಲ್ಲುವುದಿಲ್ಲ.
ದುಡಿಮೆ ಎಷ್ಟೇ ಇರಲಿ ನೀವು ದುಡಿದಿದ್ದಲ್ಲಿ ಸ್ವಲ್ಪವನ್ನಾದರೂ ಅಗತ್ಯ ಇದ್ದವರಿಗೆ ದಾನ ಮಾಡಿದರೆ ಲಕ್ಷ್ಮಿ ಒಲಿಯುತ್ತಾಳೆ.
ಮನೆಯಲ್ಲಿ ಮಹಿಳೆಯರನ್ನು ಗೌರವವಾಗಿ ನಡೆಸಿಕೊಂಡರೆ ಅಲ್ಲಿ ಲಕ್ಷ್ಮಿ ಇರುತ್ತಾಳೆ. ಹೆಣ್ಣಿಗೆ ಗೌರವ ಪ್ರೀತಿ ಇರುವ ಮನೆಯಲ್ಲಿ ಸದಾ ಲಕ್ಷ್ಮಿ ಕೃಪೆ ಇದ್ದೇ ಇರುತ್ತದೆ ಎಂದು ಆಚಾರ್ಯ ಚಾಣಕ್ಯರು ತಿಳಿಸುತ್ತಾರೆ.
ಜೀವನದಲ್ಲಿ ಶಿಸ್ತು ತುಂಬಾ ಮುಖ್ಯ. ಒಂದು ಶಿಸ್ತಿನ ಹಾದಿಯಲ್ಲಿ ಮುಂದುವರೆಯುವುದನ್ನು ರೂಢಿಸಿಕೊಂಡರೆ ನಿಮ್ಮ ಏಳ್ಗೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.