ಮೊಡವೆಗಳಿಂದ ಮೂಡಿರುವ ಮಾರ್ಕ್‌ಗಳನ್ನು ನಿವಾರಿಸಲು ಪರಿಣಾಮಕಾರಿ ಮನೆಮದ್ದುಗಳು

ಮೊಡವೆ

ಹದಿಹರೆಯದವರಲ್ಲಿ ಮೊಡವೆಗಳು ಮೂಡುವುದು ಸಹಜ. ಆದರೆ, ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಮೊಡವೆಗಳಿಂದಾಗಿ ಮೂಡುವ ಕಲೆಗಳು ಹೋಗುವುದೇ ಇಲ್ಲ. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ಈ ಪಿಂಪಲ್ ಮಾರ್ಕ್‌ಗಳನ್ನು ಸುಲಭವಾಗಿ ನಿವಾರಿಸಬಹುದು.

ಅಲೋವೆರಾ ಜೆಲ್

ವಿಟಮಿನ್‌ಗಳ ಪ್ರಬಲ ಮೂಲವಾಗಿ ಅಲೋವೆರಾ ಜೆಲ್ ಅನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಲೆಗಳು ನಿವಾರಣೆಯಾಗುತ್ತದೆ.

ಅಕ್ಕಿ ಹಿಟ್ಟು

ಅಕ್ಕಿ ಹಿಟ್ಟಿನೊಂದಿಗೆ ಹಾಲನ್ನು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ನಯವಾಗಿ ಮಸಾಜ್ ಮಾಡಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಮೊಡವೆ ಕಲೆ ಮಾಯವಾಗುತ್ತದೆ.

ಜೇನು ತುಪ್ಪ

ನೈಸರ್ಗಿಕ ಮಾಯಿಶ್ಚರೈಸರ್ ಜೇನುತುಪ್ಪದ ಒಂದೆರಡು ಹನಿಯಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಪಿಂಪಲ್ ಮಾರ್ಕ್‌ಗಳನ್ನು ನಿವಾರಿಸಬಹುದು.

ಸೌತೆಕಾಯಿ

ಸೌತೆಕಾಯಿಯನ್ನು ದುಂಡಾಗಿ ಓಳುಗಳನ್ನಾಗಿ ಕತ್ತರಿಸಿ ಮುಖಕ್ಕೆ ಮಸಾಜ್ ಮಾಡಿ. ಇದರಿಂದ ಸುಲಭವಾಗಿ ಮೊಡವೆ ಕಲೆಗಳನ್ನು ಗುಣಪಡಿಸಬಹುದು.

ಆಲೂಗಡ್ಡೆ ರಸ

ಆಲೂಗಡ್ಡೆಯ ರಸವನ್ನು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ, ಸ್ವಲ್ಪ ಸಮಯದ ಬಳಿಕ ಮುಖ ತೊಳೆಯಿರಿ. ದಿನಕ್ಕೆ ಒಂದು ಬಾರಿಯಾದರೂ ಈ ರೀತಿ ಮಾಡುವುದರಿಂದ ಮೊಡವೆ ಕಲೆ ನಿವಾರಣೆಯಾಗುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story