ಸೂರ್ಯೋದಯಕ್ಕೆ ಮುಂಚೆ ಏಳದಿದ್ದರೆ ಮನೆಯಲ್ಲಿ ದರಿದ್ರ ಬರುತ್ತದೆ ಎಂದು ಮನೆಯಲ್ಲಿ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು.
ಆದರೆ ಶಾಸ್ತ್ರಗಳಿಗಷ್ಟೇ ಅಲ್ಲ ನಿತ್ಯ ಬೇಗ ಏಳುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತದೆ.
ಮುಂಜಾನೆ ಬೇಗ ಎದ್ದೇಳುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ.
ನಿತ್ಯ ಬೇಗ ಏಳುವವರಲ್ಲಿ ಸುಸ್ತು, ಆಯಾಸ ಇತರರಿಗಿಂತ ಕಡಿಮೆಯಾಗುತ್ತದೆ.
ಬೆಳಿಗ್ಗೆ ಬೇಗ ಏಳುವವರಲ್ಲಿ ಏಕಾಗ್ರತೆ ಹೆಚ್ಚಾಗಲಿದ್ದು ಏಕಾಗ್ರತೆಯಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು ಲಭಿಸುತ್ತದೆ.
ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವವರಲ್ಲಿ ದೃಷ್ಟಿ ಸಂಬಂಧಿತ ಸಮಸ್ಯೆಗಳು ಕಡಿಮೆ.
ಮುಂಜಾನೆ ಬೇಗ ಏಳುವವರಲ್ಲಿ ಕೆಲಸಗಳನ್ನು ಮಾಡಲು ಹೆಚ್ಚಿನ ಸಮಯ ಇರುವುದರಿಂದ ಶಾಂತ ಚಿತ್ತರಾಗಿರಲು ಸಾಧ್ಯವಾಗುತ್ತದೆ.
ಮುಂಜಾನೆ ಬೇಗ ಏಳುವುದರಿಂದ ಮನಸ್ಸು ಚುರುಕಾರಿಗಿರುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.