ದೇವಸ್ಥಾನಕ್ಕೆ ಹೋದಾಗ ಬಲಗಾಲನ್ನು ಒಳಗೆ ಇಟ್ಟು ಹೋಗಬೇಕು.
ದೇವರಿಗೆ ಎರಡು ಕೈ ಎತ್ತಿ ಮುಗಿದು ದೇವಾಲಯದ ಒಳಗೆ ಹೋಗಬೇಕು.
ದೇವರ ದರ್ಶನಕ್ಕೆ ಹೋದಾಗ ದೇವರಿಗೆ ಹಣ್ಣು-ಕಾಯಿಯನ್ನು ಅರ್ಪಿಸಬೇಕು.
ಮಂಗಳಾರತಿ ಮಾಡುವಾಗ ಪ್ರದಕ್ಷಿಣೆ ಹಾಕಬಾರದು, ಒಂದೇ ಕಡೆ ನಿಂತು ಮನಸ್ಸಿನಲ್ಲಿ ದೇವರನ್ನು ನೆನೆದು ಏಕಾಗ್ರತೆಯಿಂದ ನಮಸ್ಕರಿಸಬೇಕು.
ಮಂಗಳಾರತಿಯನ್ನು ಮೊದಲು ತಲೆಗೆ ನಂತರ ಕಣ್ಣಿಗೆ ಬಳಿಕ ಎದೆಗೆ ಮುಟ್ಟಿಸಬೇಕು.
ತೀರ್ಥವನ್ನು ಕುಡಿದು ಕಣ್ಣಿಗೆ ಒತ್ತಿ ಇಟ್ಟುಕೊಳ್ಳಬೇಕು.
ಕೊನೆಯದಾಗಿ ದೇವರ ಮುಂದೆ ನಿಂತು ಎರಡು ನಿಮಿಷ ಪ್ರಾರ್ಥಿಸಿ ಹೊರಡಬೇಕು.