ಪೀರಿಯೇಡ್ಸ್ ನೋವಿನಿಂದಪರಿಹಾರ ನೀಡುತ್ತವೆ ಈ 5 ಎಣ್ಣೆ

Ranjitha R K
Oct 30,2023

ಪೀರಿಯೇಡ್ಸ್ ನೋವಿಗೆ ಮದ್ದು

ಪೀರಿಯೇಡ್ಸ್ ವೇಳೆ ಕಾಣಿಸಿಕೊಳ್ಳುವ ನೋವಿಗೆ ಕೆಲವು ಮಾತ್ರೆ ಸೇವಿಸುತ್ತಾರೆ. ಆದರೆ ಇದು ಸರಿಯಲ್ಲ, ಬದಲಿಗೆ ಮನೆಯಲ್ಲಿಯೇ ಇರುವ ಈ ಎಣ್ಣೆಯ ಸಹಾಯದಿಂದ ನೋವು ಕಡಿಮೆ ಮಾಡಬಹುದು.

ಹರಳೆಣ್ಣೆ

ಹರಳೆಣ್ಣೆಯನ್ನು ಹೊಕ್ಕಳ ಸುತ್ತ ಹಚ್ಚುವುದರಿಂದ ಪೀರಿಯೇಡ್ಸ್ ನೋವು ಕಡಿಮೆಯಾಗುತ್ತದೆ.

ಲ್ಯಾವೆನ್ ಡರ್ ಎಣ್ಣೆ

ಲ್ಯಾವೆನ್ ಡರ್ ಎಣ್ಣೆಯನ್ನು ಹೊಕ್ಕಳ ಸುತ್ತ ಹಚ್ಚುವುದರಿಂದ ಪೀರಿಯೇಡ್ಸ್ ನೋವು ನಿವಾರಣೆಯಾಗುತ್ತದೆ.

ಲವಂಗದ ಎಣ್ಣೆ

ಮುಟ್ಟಿನ ನೋವಿನಿಂದ ಪರಿಹಾರ ಪಡೆಯಲು 2 ರಿಂದ 3 ಹನಿ ಲವಂಗದ ಎಣ್ಣೆಯನ್ನು ನೀರಿಗೆ ಹಾಕಿ ಆ ನೀರಿನಲ್ಲಿ ಕುಳಿತು ಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.

ರೋಮನ್ ಕ್ಯಾಮೊಮೈಲ್ ಎಣ್ಣೆ

ಪೀರಿಯೇಡ್ಸ್ ನೋವನ್ನು ಕಡಿಮೆ ಮಾಡಲು ರೋಮನ್ ಕ್ಯಾಮೊಮೈಲ್ ಎಣ್ಣೆಯನ್ನು ಬಳಸಬಹುದು. ಈ ಎಣ್ಣೆಯನ್ನು ಕೆಲವು ಹನಿಗಳನ್ನು ನೀರಿಗೆ ಹಾಕಿ ಆ ನೀರಿನಲ್ಲಿ ಪಾದಗಳನ್ನು ಇಟ್ಟು ಕೆಲ ಹೊತ್ತು ಕುಳಿತುಕೊಳ್ಳಬೇಕು.

ಚಕ್ಕೆ ಎಣ್ಣೆ

ಚಕ್ಕೆ ಎಣ್ಣೆಯನ್ನು ಹೊಟ್ಟೆಯ ಕೆಲ ಭಾಗಕ್ಕೆ ಹಚ್ಚುವುದರಿಂದ ನೋವಿಗೆ ಪರಿಹಾರ ಸಿಗುತ್ತದೆ.

ಪುದೀನ ಎಣ್ಣೆ

ಪುದೀನ ಎಣ್ಣೆಯನ್ನು ಪೀರಿಯೇಡ್ಸ್ ಸಮಸ್ಯೆ ನಿವಾರಣೆಗೂ ಬಳಸಬಹುದು. ಇದರೊಂದಿಗೆ ನೋವು ಮತ್ತು ಫ್ಲೋ ಎರಡೂ ಸಾಮಾನ್ಯವಾಗುತ್ತದೆ.

ಕರ್ಪೂರದ ಎಣ್ಣೆ

ಪೀರಿಯೇಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಬೆನ್ನು ನೋವು ನಿವಾರಣೆಗೆ ಕರ್ಪೂರದ ಎಣ್ಣೆಯನ್ನು ಬಳಸಬಹುದು.


ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ

VIEW ALL

Read Next Story