ಮಾಲಿನ್ಯ, ಉತ್ಪನ್ನಗಳ ಅತಿಯಾದ ಬಳಕೆ, ಸರಿಯಾದ ಆರೈಕೆ ಇಲ್ಲದಿರುವುದು ಹೀಗೆ ನಾನಾ ಕಾರಣಗಳಿಂದಾಗಿ ಕೂದಲುದುರುವಿಕೆ ಸಾಮಾನ್ಯ, ಅಷ್ಟೇ ಅಲ್ಲ, ಕೂದಲು ಕಳೆಗುಂದಿ ಒರಟಾಗುತ್ತದೆ.
ಆದಾಗ್ಯೂ, ಕೆಲವು ನೈಸರ್ಗಿಕ ವಿಧಾನಗಳನ್ನು ಬಳಸಿ ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ರೇಷ್ಮೆಯಂತಹ ಕೂದಲನ್ನು ನಿಮ್ಮದಾಗಿಸಬಹುದು.
ಅಲೋವೆರಾ ಚರ್ಮ ಮಾತ್ರವಲ್ಲ, ಕೂದಲಿನ ಸಮಸ್ಯೆಗಳಿಗೂ ದಿವ್ಯೌಷಧವಾಗಿದೆ. ಇದಕ್ಕಾಗಿ ತಲೆಗೆ ಸ್ನಾನ ಮಾಡುವ ಒಂದೆರಡು ಗಂಟೆಗಳ ಮೊದಲು ತಾಜಾ ಅಲೋವೆರಾವನ್ನು ನೀರಿನಲ್ಲಿ ಬೆರೆಸಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ.
ಉದರದ ಆರೋಗ್ಯಕ್ಕೆ ಲಾಭದಾಯಕವಾಗಿರುವ ಮೊಸರನ್ನು ಆಮ್ಲಾ ಪುಡಿಯಲ್ಲಿ ಬೆರೆಸಿ ಹೇರ್ ಪ್ಯಾಕ್ ಆಗಿ ಬಳಸಿ. ವಾರಕ್ಕೆ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಕೂದಲು ಬೇರುಗಳಿಂದ ಗಟ್ಟಿಯಾಗುವುದರ ಜೊತೆಗೆ ರೇಷ್ಮೆಯಂತೆ ಹೊಳೆಯುತ್ತದೆ.
ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ರುಬ್ಬಿ ಕೂದಲಿಗೆ ಪ್ಯಾಕ್ ರೀತಿ ಅನ್ವಯಿಸಿ. ಇದರಿದ್ನ ಬಿಳಿ ಕೂದಲನ್ನು ಕಪ್ಪಾಗಿಸಿ ಕೂದಲು ರೇಷ್ಮೆಯಂತೆ ಹೊಳೆಯುವಂತೆ ಮಾಡಬಹುದು.
ವಿಟಮಿನ್ ಬಿ12 ಸಮೃದ್ಧವಾಗಿರುವ ಹಾಲು ಕೂದಲಿನ ಬೆಳವಣಿಗೆಗೆ ಉತ್ತಮ ಪೋಷಕಾಂಶವಾಗಿದೆ. ಹಾಲು ನೀರನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕೂದಲಿನ ಬುಡದಿಂದಲೂ ಅನ್ವಯಿಸಿ ಅರ್ಧಗಂಟೆ ಬಳಿಕ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಸಿಲ್ಕಿ ಹೇರ್ ಪಡೆಯುವುದು ಸುಲಭ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.