ಹಲ್ಲುಗಳು ಫಳ-ಫಳ ಹೊಳೆಯುವಂತೆ ಮಾಡಲು ಸಿಂಪಲ್ ಮನೆಮದ್ದುಗಳು

ಹಳದಿ ಹಲ್ಲುಗಳು

ಹಲ್ಲು ಹಳದಿಯಾಗುವುದು ಸಾಮಾನ್ಯ ಸಮಸ್ಯೆ. ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವಂತೆಯೇ, ಹಲ್ಲುಗಳು ಹೊಳಪು ಕಳೆದುಕೊಂಡರೆ/ ಹಳದಿ ಹಲ್ಲುಗಳು ನಮ್ಮನ್ನು ಬೇರೆಯವರ ಮುಂದೆ ನಾಚಿಕೆ ಪಡುವಂತೆಯೂ ಮಾಡುತ್ತವೆ.

ಹಲ್ಲಿನ ಸ್ವಚ್ಛತೆ

ಇದನ್ನು ತಪ್ಪಿಸಲು ನಿತ್ಯ ನಮ್ಮ ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಅಗತ್ಯ. ಹಲ್ಲುಗಳನ್ನು ಫಳ-ಫಳ ಹೊಳೆಯುವಂತೆ ಮಾಡಲು ಕೆಲವು ಮನೆಮದ್ದುಗಳು ಕೂಡ ನಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

ನಿಂಬೆ ರಸ

ನಿಂಬೆ ರಸದೊಂದಿಗೆ ಸ್ವಲ್ಪ ಉಪ್ಪು, ಒಂದೆರಡು ಹನಿ ಸಾಸಿವೆ ಎಣ್ಣೆಯನ್ನು ಬೆರೆಸಿ ಬ್ರಶ್ ಮಾಡಿ ಇದರಿಂದ ಹಲ್ಲಿನಲ್ಲಿ ಶೇಖರವಾಗಿರುವ ಕೊಳೆ ನಿವಾರಣೆಯಾಗಿ ಹಲ್ಲುಗಳು ಕಾಂತಿಯನ್ನು ಪಡೆಯುತ್ತವೆ.

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಯ ಒಳ ಭಾಗವನ್ನು ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಕ್ರಮೇಣ ಹಳದಿ ಹಲ್ಲುಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ.

ಬೇಕಿಂಗ್ ಸೋಡಾ

ಪ್ರತಿ ಮನೆಯಲ್ಲೂ ತುಂಬಾ ಸುಲಭವಾಗಿ ಲಭ್ಯವಿರುವ ಬೇಕಿಂಗ್ ಸೋಡಾದಿಂದ ಬ್ರಶ್ ಮಾಡುವುದು ಸಹ ಕೂಡ ಹಲ್ಲುಗಳನ್ನು ಬಿಳುಪುಗೊಳಿಸಲು ಸುಲಭ ಮಾರ್ಗವಾಗಿದೆ.

ಕಿತ್ತಳೆ ಸಿಪ್ಪೆ

ನಿತ್ಯ ಕಿತ್ತಳೆ ಸಿಪ್ಪೆಯಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಿದರೆ ಕೆಲವೇ ದಿನಗಳಲ್ಲಿ ಹಳದಿ ಹಲ್ಲುಗಳು ಬೆಳ್ಳಗಾಗುತ್ತವೆ.

ಉಪ್ಪು

ಉಪ್ಪಿನಿಂದ ಹಲ್ಲುಜ್ಜುವುದರಿಂದಲೂ ಹಲ್ಲುಗಳು ಬಿಳುಪಾಗುತ್ತವೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story